alex Certify ನಿರುದ್ಯೋಗಿ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್: ನಗದು ಪರಿಹಾರ ಪಡೆಯಲು ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರುದ್ಯೋಗಿ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್: ನಗದು ಪರಿಹಾರ ಪಡೆಯಲು ಅವಕಾಶ

ಶಿವಮೊಗ್ಗ: ಕೇಂದ್ರ ಸರ್ಕಾರವು ಕಾರ್ಮಿಕರ ವಿಮಾ ನಿಗಮದ ಮೂಲಕ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯ ಮೂಲ ಉದ್ದೇಶವು ನೋಂದಾಯಿತ ವಿಮಾ ಕಾರ್ಮಿಕರ ಹಲವಾರು ಕಾರಣಗಳಿಂದ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿರುವುದರಿಂದ ಅವರ ನಿರುದ್ಯೋಗ ಅವಧಿಗೆ ನಗದು ಪರಿಹಾರ ಒದಗಿಸುವ ಉದ್ದೇಶವಾಗಿರುತ್ತದೆ.

ಈ ಯೋಜನೆಯು ಜೂನ್ -2021ರ ಅಂತ್ಯದವರೆಗೆ ಜಾರಿಯಲ್ಲಿರುತ್ತದೆ. ನಿಗಮದಲ್ಲಿ ನೋಂದಣಿಯಾದ ಕನಿಷ್ಠ 2 ವರ್ಷಗಳ ಅವಧಿಯಲ್ಲಿ ವಂತಿಗೆಯನ್ನು ಪಾವತಿಸಿ ನಿರುದ್ಯೋಗಿಯಾದ ದಿನಾಂಕದ ಪೂರ್ವ 2 ವರ್ಷಗಳಲ್ಲಿ ಕನಿಷ್ಠ 78 ದಿನಗಳ ವಂತಿಗೆ ಪಾವತಿಸಿರಬೇಕು.

ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳ ಕಚೇರಿ, ಸೂಡಾ ಕಾಂಪ್ಲೇಕ್ಸ್, 2ನೇ ಮಹಡಿ, ವಿನೋಬನಗರ, ಶಿವಮೊಗ್ಗ, ದೂ.ಸಂ.: 08182-248940 ಹಾಗೂ ವೆಬ್‍ಸೈಟ್  www.esic.nic.in ಸಂಪರ್ಕಿಸುವಂತೆ ಕಾರ್ಮಿಕ ಅಧಿಕಾರಿ ತಿಳಿಸಿರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...