alex Certify SHOCKING: ಗನ್ ಪಾಯಿಂಟ್ ನಲ್ಲಿ ಸೋದರಿಯರ ಮೇಲೆ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಗನ್ ಪಾಯಿಂಟ್ ನಲ್ಲಿ ಸೋದರಿಯರ ಮೇಲೆ ಅತ್ಯಾಚಾರ

ಪಂಜಾಬ್(ಪಾಕಿಸ್ತಾನ): ಹಿಂದೂ ಸಮುದಾಯಕ್ಕೆ ಸೇರಿದ 16 ಮತ್ತು 17 ವರ್ಷದ ಇಬ್ಬರು ಸಹೋದರಿಯರ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರವೆಸಗಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 5 ರಂದು ಪಂಜಾಬ್ ಪ್ರಾಂತ್ಯದ ಬಹವಲ್‌ನಗರ ಜಿಲ್ಲೆಯ ಲಾಹೋರ್‌ನಿಂದ 300 ಕಿಮೀ ದೂರದಲ್ಲಿರುವ ಫೋರ್ಟ್ ಅಬ್ಬಾಸ್ ಟೌನ್‌ನಲ್ಲಿ ಈ ಘಟನೆ ಸಂಭವಿಸಿದೆ. ಆದರೆ, ಈ ವಿಷಯವು ಇತ್ತೀಚೆಗೆ ಮುನ್ನೆಲೆಗೆ ಬಂದಿದೆ. ಆರೋಪಿಗಳನ್ನು ಉಮೈರ್ ಅಶ್ಫಾಕ್ ಮತ್ತು ಕಾಶಿಫ್ ಅಲಿ ಎಂದು ಗುರುತಿಸಲಾಗಿದೆ.

ಇಬ್ಬರು ಸಹೋದರಿಯರು ಬೆಳಿಗ್ಗೆ ಫೋರ್ಟ್ ಅಬ್ಬಾಸ್‌ನಲ್ಲಿರುವ ತಮ್ಮ ಮನೆಯಿಂದ ಹತ್ತಿರದ ಮೈದಾನದಲ್ಲಿ ಪ್ರಕೃತಿಯ ಕರೆಗೆ ಹಾಜರಾಗಲು ಹೋಗಿದ್ದ ವೇಳೆ ಆರೋಪಿಗಳು ಬಂದೂಕು ತೋರಿಸಿ ಅವರನ್ನು ಹಿಡಿದಿದ್ದಾರೆ ಎಂದು ಆ ಪ್ರದೇಶದ ಪೊಲೀಸ್ ಅಧಿಕಾರಿ ಇರ್ಷಾದ್ ಯಾಕೂಬ್ ತಿಳಿಸಿದ್ದಾರೆ.

ಗನ್ ತೋರಿಸಿ ಅವರ ಮೇಲೆ ಅತ್ಯಾಚಾರವೆಸಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇಬ್ಬರು ಬಾಲಕಿಯರ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಘಟನೆಯ ಮೂರು ದಿನಗಳ ನಂತರ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರದೇಶದ ಕೆಲವು ಪ್ರಭಾವಿ ವ್ಯಕ್ತಿಗಳು ಸಂತ್ರಸ್ತರ ಕುಟುಂಬದೊಂದಿಗೆ ಸೌಹಾರ್ದಯುತವಾಗಿ ವಿಷಯವನ್ನು ಇತ್ಯರ್ಥಪಡಿಸಲು ಬಯಸಿದ್ದರು. ಆರೋಪಿಗಳಲ್ಲಿ ಒಬ್ಬನಾದ ಕಾಶಿಫ್ ಪ್ರದೇಶದ ಪ್ರಭಾವಿ ಕುಟುಂಬಕ್ಕೆ ಸೇರಿದವನಾಗಿದ್ದಾನೆ. ಬಾಲಕಿಯರ ತಂದೆ ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಯಾಕೂಬ್ ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ನ್ಯಾಯಾಲಯದಿಂದ ಬಂಧನ ಪೂರ್ವ ಜಾಮೀನು ಪಡೆದಿದ್ದಾನೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...