alex Certify ಕಾರ್​ ರೂಫ್ ‘ವೈಟ್’ ಇದ್ದರೆ ಸಿಗುತ್ತೆ ಈ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್​ ರೂಫ್ ‘ವೈಟ್’ ಇದ್ದರೆ ಸಿಗುತ್ತೆ ಈ ಪ್ರಯೋಜನ

ಮನೆಯ ಚಾವಡಿ ಬಿಳಿ ಬಣ್ಣದಲ್ಲಿದ್ದರೆ ಶಾಖದ ಪರಿಣಾಮಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂಬ ಮಾತಿದೆ. ಅದೇ ಅಭ್ಯಾಸವನ್ನು ಆಟೋಮೋಟಿವ್​ ವಲಯದಲ್ಲಿ ಅನ್ವಯಿಸಬಹುದು.

ಎಲ್ಲಾ ಕಾರುಗಳು ಬಿಳಿ ಟಾಪ್​ ಹೊಂದಿದ್ದರೆ, ಇದು ಚಾಲಕರು ಕಡಿಮೆ ಕಾರ್ಬನ್​ ಡೈಯಾಕ್ಸೈಡ್​ (ಸಿಒ2) ಅನ್ನು ಗಾಳಿಯಲ್ಲಿ ಹೊರಸೂಸುವಂತೆ ಮಾಡುತ್ತದೆ ಮತ್ತು ಹಣವನ್ನು ಉಳಿಸುತ್ತದೆ.

ಫ್ರಾನ್ಸ್​ನ ರಾಷ್ಟ್ರೀಯ ರೈಲ್ವೇ ಕಂಪನಿಯ ಅಂಗ ಸಂಸ್ಥೆ ಎಆರ್​ಇಪಿ ನ ಆಕಿರ್ಟೆಕ್ಚರ್​ ಏಜೆನ್ಸಿಯ ಅಧ್ಯಕ್ಷ ರಾಫೆಲ್​ ಮೆರ್ನಾಡ್​ ಅವರು ಫ್ರೆಂಚ್​ ಪತ್ರಿಕೆಯಲ್ಲಿ ಇತ್ತೀಚೆಗೆ ಬರೆದ ಅಂಕಣದಲ್ಲಿ ಈ ಅಂಶ ಪ್ರತಿಪಾದಿಸಿದ್ದಾರೆ.

ಅವರು ದೀರ್ಘಾವಧಿಯಲ್ಲಿ ಕಾರುಗಳನ್ನು ವ್ಯವಸ್ಥಿತವಾಗಿ ಬಿಳಿ ಬಣ್ಣ ಮಾಡಬೇಕು. ಈ ಪರಿಹಾರವು ಆಲ್ಬೆಡೋದ ಕಲ್ಪನೆಯನ್ನು ಆಧರಿಸಿದೆ ಅಥವಾ ಅದರ ಬಣ್ಣಕ್ಕೆ ಅನುಗುಣವಾಗಿ ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸುವ ಮೇಲ್ಮೈಯ ಸಾಮರ್ಥ್ಯವನ್ನು ಆಧರಿಸಿದೆ. ಈ ತತ್ತ್ವವನ್ನು ಈಗಾಗಲೇ ಕಟ್ಟಡಗಳಲ್ಲಿ ಬಳಸಲಾಗುತ್ತದೆ ಎಂದಿದ್ದಾರೆ.

ಆಟೋಮೋಟಿವ್​ ವಲಯಕ್ಕೆ ಈ ಬದಲಾವಣೆಯ ಅವಶ್ಯಕತೆ ಕುರಿತು ಹವಾಮಾನ ಬದಲಾವಣೆಯ ಕುರಿತಾದ ಇಂಟರ್​ ಗವರ್ನಮೆಂಟಲ್​ ಪ್ಯಾನೆಲ್​ನಲ್ಲಿಪ್ರಸ್ತಾಪವಾಗಿದೆ.

ರಾಫೆಲ್​ ಮೆರ್ನಾಡ್​ ಪ್ರಕಾರ, ಫ್ರಾನ್ಸ್​ ಒಂದರಲ್ಲೇ, ಇಡೀ ಕಾರುಗಳ ಫ್ಲೀಟ್​ ಅನ್ನು ಬಿಳಿ ಬಣ್ಣ ಬಳಿದರೆ ವರ್ಷಕ್ಕೆ 500 ಮಿಲಿಯನ್​ ಲೀಟರ್​ ಗ್ಯಾಸೋಲಿನ್​ ಉಳಿತಾಯ ಅಥವಾ ಕೊಳ್ಳುವ ಶಕ್ತಿಯಲ್ಲಿ ಸುಮಾರು ಒಂದು ಬಿಲಿಯನ್​ ಯುರೋಗಳಷ್ಟು ಉಳಿತಾಯವನ್ನು ಕಾಣಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಇದು ಗಾಳಿಯಲ್ಲಿ ಹೊರಸೂಸಲ್ಪಟ್ಟ ಒಂದು ಮಿಲಿಯನ್​ ಕಡಿಮೆ ಟನ್​ ಸಿಒ2 ಗೆ ಸಮನಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...