alex Certify ‘ಇದು ನಮ್ಮ ಮನೆ, ನಿಮ್ಮ ಕಸದಬುಟ್ಟಿಯಲ್ಲ’ – ಪ್ರವಾಸಿಗರ ವಿರುದ್ಧ ಲಡಾಕ್​ ಬಿಜೆಪಿ ರಾಜ್ಯಾಧ್ಯಕ್ಷ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಇದು ನಮ್ಮ ಮನೆ, ನಿಮ್ಮ ಕಸದಬುಟ್ಟಿಯಲ್ಲ’ – ಪ್ರವಾಸಿಗರ ವಿರುದ್ಧ ಲಡಾಕ್​ ಬಿಜೆಪಿ ರಾಜ್ಯಾಧ್ಯಕ್ಷ ಕಿಡಿ

ಕೊರೊನಾ ಎರಡನೆ ಅಲೆಯಲ್ಲಿ ಇಳಿಮುಖ ಕಾಣ್ತಿರೋದು ಒಂದೆಡೆ ಸಮಾಧಾನಕಾರ ವಿಚಾರವಾದರೆ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಕೂಡ ನಡುಕ ಹುಟ್ಟಿಸಿದೆ. ಆದರೆ ಪ್ರವಾಸಿಗರು ಮಾತ್ರ ಕೊರೊನಾವನ್ನೂ ಲೆಕ್ಕಿಸದೇ ಪ್ರವಾಸ ಮಾಡೋದ್ರಲ್ಲೇ ನಿರತರಾಗಿದ್ದಾರೆ. ಈ ನಡುವೆ ಲಡಾಕ್​​ನ ಬಿಜೆಪಿ ರಾಜ್ಯಾಧ್ಯಕ್ಷ ಪ್ರವಾಸಿ ತಾಣದಲ್ಲಿ ಗಲೀಜು ಮಾಡುವವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಲಡಾಖ್​​ನ ಪ್ರವಾಸಿ ತಾಣಗಳಲ್ಲಿ ಬಳಸಿದ ಪ್ಲಾಸ್ಟಿಕ್​ ಬಾಟಲಿ ಸೇರಿದಂತೆ ವಿವಿಧ ಕಸದ ರಾಶಿಯ ಫೋಟೋ ಶೇರ್​ ಮಾಡಿದ ಲಡಾಕ್​ನ ಬಿಜೆಪಿ ರಾಜ್ಯಾಧ್ಯಕ್ಷ ಜಮಯಂಗ್​​ ತ್ಸೆರಿಂಗ್​ ನಂಗ್ಯಾಲ್​​ ಇದು ನಮ್ಮ ಮನೆ, ನಿಮ್ಮ ಕಸದ ಬುಟ್ಟಿಯಲ್ಲ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಶ್ರೀಮಂತ ಸಂಸ್ಕೃತಿ, ಅದ್ಭುತ ಪ್ರಕೃತಿ ಹಾಗೂ ಉಜ್ವಲ ಭವಿಷ್ಯವನ್ನ ಗೌರವಿಸಿ ಎಂದು ಹೇಳಿದ್ದಾರೆ.

ಚಾರಣ ಪ್ರಿಯರಿಗೆ ಹಾಗೂ ಪ್ರಕೃತಿ ಸೌಂದರ್ಯವನ್ನ ಇಷ್ಟ ಪಡುವವರಿಗೆ ಲಡಾಖ್​​ ಪರ್ವತಗಳು ಫೇವರಿಟ್​ ತಾಣವಾಗಿದೆ. ಲಡಾಕ್​​ನಲ್ಲಿ ಪ್ರಸ್ತುತ 20,204 ಕೊರೊನಾ ಪ್ರಕರಣಗಳಿವೆ. ಹಾಗೂ ಕೊರೊನಾದಿಂದಾಗಿ 206 ಮಂದಿ ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...