alex Certify ONLINE ಗೇಮಿಂಗ್ ನಲ್ಲಿ ವೃದ್ಧಿ..! ಈ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ ಶುರು ಮಾಡಿದ್ರೆ ಸಿಗಲಿದೆ ದುಪ್ಪಟ್ಟು ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ONLINE ಗೇಮಿಂಗ್ ನಲ್ಲಿ ವೃದ್ಧಿ..! ಈ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ ಶುರು ಮಾಡಿದ್ರೆ ಸಿಗಲಿದೆ ದುಪ್ಪಟ್ಟು ಲಾಭ

ಕೊರೊನಾದಿಂದಾಗಿ ವರ್ಕ್ ಫ್ರಂ ಹೋಮ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮಕ್ಕಳಿಗೆ ಆನ್ಲೈನ್ ನಲ್ಲಿ ಶಿಕ್ಷಣ ನಡೆಯುತ್ತಿದೆ. ಬಿಡುವಿನ ಸಮಯದಲ್ಲಿ ಜನರು ಆನ್ಲೈನ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಆನ್ಲೈನ್ ಗೇಮಿಂಗ್ ನಲ್ಲಿಯೂ ವೃದ್ಧಿ ಕಂಡು ಬಂದಿದೆ.

ಕೆಪಿಎಂಜಿಯ ವರದಿಯ ಪ್ರಕಾರ, 2021 ಮತ್ತು 2025 ರ ನಡುವೆ ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಶೇಕಡಾ 21 ರಷ್ಟು ಹೆಚ್ಚಾಗಲಿದೆ. ಇದು ಸುಮಾರು 29 ಸಾವಿರ ಕೋಟಿಗಳ ವ್ಯವಹಾರವಾಗಲಿದೆ. 2011ರಲ್ಲಿ 6 ಸಾವಿರ ಕೋಟಿಗೂ ಹೆಚ್ಚು ವ್ಯವಹಾರ ನಡೆಸಿದ್ದ ಈ ಉದ್ಯಮ 2025ರ ವೇಳೆಗೆ ಮತ್ತಷ್ಟು ಬೆಳವಣಿಗೆ ಕಾಣಲಿದೆ.

ಮೊದಲು ಗೇಮರ್ಸ್ ಸ್ಮಾರ್ಟ್ಫೋನ್ ಮೂಲಕ ಆಟವಾಡ್ತಿದ್ದರು. ಈಗ ಡೆಸ್ಕ್ ಟಾಪ್‌, ಲ್ಯಾಪ್‌ಟಾಪ್‌ ಮತ್ತು ದೊಡ್ಡ ಪರದೆಯ ಟಿವಿಗಳಲ್ಲಿ ಆಟವಾಡ್ತಿದ್ದಾರೆ. ಲಾಕ್ ಡೌನ್ ನಲ್ಲಿ ಮಾತ್ರವಲ್ಲ ಜನರು ಉಳಿದ ಸಮಯದಲ್ಲೂ ಗೇಮಿಂಗ್ ಮುಂದುವರೆಸಿದ್ದಾರೆ. ಆನ್ಲೈನ್ ಗೇಮಿಂಗ್ ಹೆಚ್ಚಾಗ್ತಿದ್ದಂತೆ ಲ್ಯಾಪ್ ಟಾಪ್ ಗೆ ಬೇಡಿಕೆಯೂ ಹೆಚ್ಚಾಗಿದೆ. ಹಾಗಾಗಿ ಸ್ಮಾರ್ಟ್ಫೋನ್ ಹಾಗೂ ಲ್ಯಾಪ್ ಟಾಪ್ ಮತ್ತು ಡೆಸ್ಕ್ ಟಾಪ್ ನಿಮಗೆ ಉತ್ತಮ ಲಾಭ ನೀಡುವ ಸಾಧ್ಯತೆಯಿದೆ. ಈ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್ ಶುರು ಮಾಡಿದ್ರೆ ಹೆಚ್ಚಿನ ಲಾಭ ಗಳಿಸಬಹುದೆಂದು ತಜ್ಞರು ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...