alex Certify ಜಾಲತಾಣದಲ್ಲಿ ಬಾಲಕಿಗೆ ಅಶ್ಲೀಲ ವಿಡಿಯೋ, ಫೋಟೋ ಕಳಿಸಿ ಕಿರುಕುಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಲತಾಣದಲ್ಲಿ ಬಾಲಕಿಗೆ ಅಶ್ಲೀಲ ವಿಡಿಯೋ, ಫೋಟೋ ಕಳಿಸಿ ಕಿರುಕುಳ

ಬೆಂಗಳೂರು: ಬಾಲಕಿಗೆ ಅಶ್ಲೀಲ ಫೋಟೋ, ವಿಡಿಯೋ ಕಳುಹಿಸುತ್ತಿದ್ದ ವ್ಯಕ್ತಿಯ ವಿರುದ್ಧ ಪೋಷಕರು ದೂರು ನೀಡಿದ್ದಾರೆ.

ಇಮೇಲ್ ಮೂಲಕ ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಲಾಗಿದೆ. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಆನ್ಲೈನ್ ಕ್ಲಾಸ್ ವೇಳೆಯಲ್ಲಿ ಬಾಲಕಿ ಇನ್ ಸ್ಟಾಗ್ರಾಮ್ ನಲ್ಲಿ ಖಾತೆ ಓಪನ್ ಮಾಡಿದ್ದು, ಬಾಲಕಿಗೆ ಒಬ್ಬ ವ್ಯಕ್ತಿ ಪರಿಚಯವಾಗಿದ್ದಾನೆ. ಪರಿಚಯ ಮಾಡಿಕೊಂಡು ಅಶ್ಲೀಲ ಫೋಟೋ ಕಳುಹಿಸಿ ಕಿರಿಕಿರಿ ಉಂಟು ಮಾಡಿದ್ದು, ಇದೇ ರೀತಿ ಬಾಲಕಿಗೂ ಕೂಡ ಫೋಟೋ ಕಳುಹಿಸಲು ಒತ್ತಡ ಹೇರಿದ್ದಾನೆ.

ಆತ ಕಳುಹಿಸಿದ್ದ ಅಶ್ಲೀಲ ಫೋಟೋಗಳನ್ನು ಬಾಲಕಿ ಡಿಲೀಟ್ ಮಾಡಿದ್ದಳು. ನಂತರ ಪೋಷಕರು ಆತನನ್ನು ಬ್ಲಾಕ್ ಮಾಡಿದ್ದು, ಬೇರೆ ಖಾತೆಯಿಂದ ಮತ್ತೆ ಫೋಟೋ ಕಳಿಸುವಂತೆ ಬಾಲಕಿಗೆ ಒತ್ತಡ ಹಾಕಿದ್ದಾನೆ, ಹೀಗಾಗಿ ಪೋಷಕರು ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...