alex Certify ONLINE ನಲ್ಲಿ ವಿದ್ಯುತ್ ಬಿಲ್ ಕಟ್ಟಲು ಹೋದ ವ್ಯಕ್ತಿಗೆ 5.36 ಲಕ್ಷ ರೂಪಾಯಿ ವಂಚನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ONLINE ನಲ್ಲಿ ವಿದ್ಯುತ್ ಬಿಲ್ ಕಟ್ಟಲು ಹೋದ ವ್ಯಕ್ತಿಗೆ 5.36 ಲಕ್ಷ ರೂಪಾಯಿ ವಂಚನೆ…!

ಆನ್ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಹೋದ ವ್ಯಕ್ತಿಯೊಬ್ಬರು ಬರೋಬ್ಬರಿ 5.36 ಲಕ್ಷ ರೂಪಾಯಿ ವಂಚನೆಗೊಳಗಾಗಿದ್ದು, ಇಂತಹದೊಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಗುಂಡಪ್ಪ ಶೆಡ್ ನಿವಾಸಿಯಾದ ಈ ವ್ಯಕ್ತಿಗೆ ಅವರ ಸಹೋದರ ಸಂದೇಶವೊಂದನ್ನು ಫಾರ್ವರ್ಡ್ ಮಾಡಿದ್ದು, ವಿದ್ಯುತ್ ಬಿಲ್ ಪಾವತಿಸುವಂತೆ ತಿಳಿಸಿದ್ದರು ಎನ್ನಲಾಗಿದೆ.

ಸಂದೇಶದಲ್ಲಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿದ ವೇಳೆ ಎನಿ ಡೆಸ್ಕ್ ಆಪ್ ಡೌನ್ಲೋಡ್ ಮಾಡಲು ಸೂಚಿಸಲಾಗಿದ್ದು, ಅದರಂತೆ ಡೌನ್ಲೋಡ್ ಮಾಡಿ ನಂಬರ್ ತಿಳಿಸಿದ್ದಾರೆ.

ಕೂಡಲೇ ಎನಿ ಡೆಸ್ಕ್ ಮೂಲಕ ತನ್ನ ವಶಕ್ಕೆ ಪಡೆದ ವಂಚಕ, ಬ್ಯಾಂಕ್ ಖಾತೆಯಿಂದ 2 ರೂಪಾಯಿ ಪಾವತಿಸಲು ಹೇಳಿದ್ದಾನೆ. ಆ ಕಾರ್ಯ ಮಾಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಬರೋಬ್ಬರಿ 5.36 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದಾನೆ. ಇದೀಗ ವಂಚನೆಗೊಳಗಾದ ವ್ಯಕ್ತಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...