alex Certify ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ONGC ಯಲ್ಲಿ ಖಾಲಿ ಇರುವ 3 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನೆರೆಡೇ ದಿನ ಬಾಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ONGC ಯಲ್ಲಿ ಖಾಲಿ ಇರುವ 3 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನೆರೆಡೇ ದಿನ ಬಾಕಿ

ಸರ್ಕಾರಿ ಸ್ವಾಮ್ಯದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಆಫ್ ಇಂಡಿಯಾ (ONGC) 3,600 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ.
ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 15, 2022 ಕೊನೆಯ ದಿನವಾಗಿದೆ.

ONGCಯ ಉತ್ತರ ವಲಯದಲ್ಲಿ 209 ಹುದ್ದೆಗಳು, ಮುಂಬೈ ವಲಯದಲ್ಲಿ 305, ಪಶ್ಚಿಮ ವಿಭಾಗದಲ್ಲಿ 1,434, ಪೂರ್ವ ವಲಯದಲ್ಲಿ 744, ಕೇಂದ್ರೀಯ ವಲಯದಲ್ಲಿ 228, ದಕ್ಷಿಣ ವಲಯದಲ್ಲಿ 694 ಹುದ್ದೆಗಳು ಖಾಲಿ ಇವೆ.

BIG NEWS: ಮಕ್ಕಳಲ್ಲಿ ಟೊಮೆಟೊ ಜ್ವರ ಭೀತಿ; ಎಚ್ಚರ ವಹಿಸುವಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಸೂಚನೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 24 ವರ್ಷಗಳಾಗಿರಬೇಕು. ಅಂದರೆ, ಮೇ 15, 1998 ರಿಂದ ಮೇ 15, 2004 ಮಧ್ಯದಲ್ಲಿ ಜನಿಸಿದವರಾಗಿರಬೇಕು.

ಐಟಿಐ/ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿ(ಎಸ್ ಬಿಟಿಇ)/ ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ (ಎನ್ ಸಿವಿಟಿ) ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ongcindia.com ಗೆ ಭೇಟಿ ನೀಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...