alex Certify ತಾಯಿ-ಮಗುವನ್ನು ಆಶೀರ್ವದಿಸಿದ ಗಜರಾಜ: ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡ ಐಪಿಎಸ್ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ-ಮಗುವನ್ನು ಆಶೀರ್ವದಿಸಿದ ಗಜರಾಜ: ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡ ಐಪಿಎಸ್ ಅಧಿಕಾರಿ

ಇಡೀ ದೇಶ ಗಣೇಶ ಚತುರ್ಥಿಯನ್ನು ಸಂಭ್ರಮ, ಸಡಗರದಿಂದ ಆಚರಿಸಿದೆ. ಭಕ್ತರು ತಮ್ಮ ಮನೆಗಳಿಗೆ ಗಣಪತಿಯನ್ನು ಸಡಗರ, ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಜನರು ಹಬ್ಬವನ್ನು ಆಚರಿಸುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ಮಧ್ಯೆ, ಆಗಸ್ಟ್ 31 ರಂದು ಭಾರತೀಯ ಪೊಲೀಸ್ ಸೇವಾ ಅಧಿಕಾರಿ ದೀಪಾಂಶು ಕಬ್ರಾ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಆನೆಯೊಂದು ಮಹಿಳೆ ಮತ್ತು ಆಕೆಯ ಮಗುವಿಗೆ ಆಶೀರ್ವಾದ ಮಾಡುವುದನ್ನು ನೋಡಬಹುದು.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆನೆಯೊಂದು ಮಹಿಳೆ ಮತ್ತು ಆಕೆಯ ಮಗುವಿಗೆ ಆಶೀರ್ವಾದ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಆನೆಯು ತನ್ನ ಸೊಂಡಿಲನ್ನು ಮೆಲ್ಲನೆ ಅವರ ತಲೆಯ ಮೇಲೆ ಇಟ್ಟು ಆಶೀರ್ವಾದ ಮಾಡಿದೆ.

ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು. ನಿಮ್ಮ ಪ್ರಾರ್ಥನೆಗಳನ್ನು ಸ್ವೀಕರಿಸಿ ಮತ್ತು ನಿಮ್ಮೆಲ್ಲಾ ಅಡೆತಡೆಗಳು ನಿವಾರಣೆಯಾಗಲಿ ಹಾಗೂ ಗಣೇಶನು ನಿಮಗೆ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ನೀಡಲಿ ಎಂದು ಕೋರುತ್ತಾ ಈ ವಿಡಿಯೋವನ್ನು ಅಧಿಕಾರಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...