alex Certify On camera: ಅರೆನಗ್ನ ಅವತಾರದಲ್ಲಿ ದೆಹಲಿ ಮೆಟ್ರೋ ಏರಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

On camera: ಅರೆನಗ್ನ ಅವತಾರದಲ್ಲಿ ದೆಹಲಿ ಮೆಟ್ರೋ ಏರಿದ ಯುವತಿ

ನಾನು ಧರಿಸುವ ಬಟ್ಟೆಯಿಂದ ನಿಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದಕೆ ಕ್ಷಮೆ ಕೇಳುತ್ತೇನೆ. ಇನ್ಮುಂದೆ ನೀವು ಬದಲಾದ ಉರ್ಫಿಯನ್ನು ನೋಡುತ್ತೀರೆಂದು ಉರ್ಫಿ ಜಾವೇದ್ ಹೇಳಿದ ಬೆನ್ನಲ್ಲೇ ಮತ್ತೊಬ್ಬ ಉರ್ಫಿ ಹುಟ್ಟಿಕೊಂಡಿದ್ದಾರಾ ಎಂಬ ಅನುಮಾನ ಶುರುವಾಗಿದೆ. ಯಾಕೆಂದರೆ ದೆಹಲಿ ಮೆಟ್ರೋದಲ್ಲಿ ಉರ್ಫಿ ರೀತಿ ಬಟ್ಟೆ ಧರಿಸಿ ಯುವತಿಯೊಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಅಪರಿಚಿತ ಹುಡುಗಿಯೊಬ್ಬಳು ಬ್ರಾ ಮತ್ತು ಸೈಡ್ ಸ್ಲಿಟ್ ಇರುವ ಮಿನಿಸ್ಕರ್ಟ್ ಧರಿಸಿರುವ ಫೋಟೋಗಳು ವೈರಲ್ ಆಗಿವೆ.

ವೀಡಿಯೋವನ್ನು ಎನ್‌ಸಿಎಂಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಲಾಗಿದೆ. ವಿಡಿಯೋಗೆ “ಇಲ್ಲ, ಅವಳು ಉರ್ಫಿ ಅಲ್ಲ” ಎಂದು ಶೀರ್ಷಿಕೆ ನೀಡಲಾಗಿದೆ.

ಎನ್‌ಸಿಎಂಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಸರ್ಕಾರೇತರ ಸಂಸ್ಥೆ (NGO) ಆಗಿದ್ದು ಎಲ್ಲರಿಗೂ ಸಮಾನ ಹಕ್ಕುಗಳು, ಲಿಂಗ ತಟಸ್ಥ ಕಾನೂನುಗಳ ಕಾರಣಕ್ಕಾಗಿ ಕೆಲಸ ಮಾಡುತ್ತದೆ. ಯುವತಿಯ ಬಟ್ಟೆ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದೇ ರೀತಿಯ ವಸ್ತ್ರ ಧರಿಸಿದ್ದ ಪುರುಷನನ್ನು ಪೊಲೀಸರು ಬಂಧಿಸಿದ್ದನ್ನ ಪ್ರಶ್ನಿಸಿ ಅಸಮಾನತೆ ಎಂದು ಕಿಡಿಕಾರಿದ್ದಾರೆ.

ಕೆಲ ದಿನಗಳ ಹಿಂದೆ ಬನಿಯನ್ ಮತ್ತು ಒಳ ಉಡುಪನ್ನಷ್ಟೇ ಧರಿಸಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...