alex Certify ಬುಲ್ಡೋಜರ್ ಟೈರ್ ಸ್ಫೋಟ: ಇಬ್ಬರು ಕಾರ್ಮಿಕರ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬುಲ್ಡೋಜರ್ ಟೈರ್ ಸ್ಫೋಟ: ಇಬ್ಬರು ಕಾರ್ಮಿಕರ ದುರ್ಮರಣ

ಚತ್ತೀಸ್ ಗಢದ ರಾಯಪುರ ಜಿಲ್ಲೆಯಲ್ಲಿ ಬುಲ್ಡೋಜರ್ ವಾಹನದ ಚಕ್ರಕ್ಕೆ ಗಾಳಿ ಹಾಕುವ ಸಂದರ್ಭದಲ್ಲಿ ಚಕ್ರ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ದುರ್ಮರಣವನ್ನಪ್ಪಿದ್ದಾರೆ.

ಈ ಘಟನೆ ರಾಯಪುರದ ಸಿಲ್ಟಾರ ಕೈಗಾರಿಕಾ ಪ್ರದೇಶದ ವರ್ಕ್ ಶಾಪ್ ವೊಂದರಲ್ಲಿ ಮೇ 3 ರಂದು ನಡೆದಿದ್ದು, ಈ ಹೃದಯ ವಿದ್ರಾವಕ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬುಲ್ಡೋಜರ್ ನ ಬೃಹತ್ ಗಾತ್ರದ ಟೈರ್ ಗೆ ಕಾರ್ಮಿಕನೊಬ್ಬ ಗಾಳಿ ತುಂಬಿಸುತ್ತಿದ್ದು, ಮತ್ತೋರ್ವ ವ್ಯಕ್ತಿ ಗಾಳಿ ತುಂಬುತ್ತಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಟೈರ್ ಅನ್ನು ಹಲವು ಬಾರಿ ಒತ್ತಿದ್ದಾನೆ. ಇದರಿಂದ ಟೈರ್ ಸ್ಫೋಟಗೊಂಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಕ್ತಿಶಾಲಿಯಾಗಿ ಸ್ಫೋಟಗೊಂಡ ಪರಿಣಾಮ ಇಬ್ಬರೂ ವ್ಯಕ್ತಿಗಳ ದೇಹಗಳು ಸುಮಾರು ದೂರದವರೆಗೆ ಹಾರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ಇಬ್ಬರು ಕಾರ್ಮಿಕರು ಮಧ್ಯಪ್ರದೇಶದ ರೇವಾ ಜಿಲ್ಲೆಯ ನಿವಾಸಿಗಳಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...