alex Certify ON CAMERA: ನೃತ್ಯ ಮಾಡುವಾಗಲೇ ಕುಸಿದು ಬಿದ್ದು ವೃದ್ಧೆ ಸಾವು; ಮಸಣವಾಗಿ ಮಾರ್ಪಟ್ಟ ಮದುವೆ ಮನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ON CAMERA: ನೃತ್ಯ ಮಾಡುವಾಗಲೇ ಕುಸಿದು ಬಿದ್ದು ವೃದ್ಧೆ ಸಾವು; ಮಸಣವಾಗಿ ಮಾರ್ಪಟ್ಟ ಮದುವೆ ಮನೆ

ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವವರ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲೂ ಡಿಸೆಂಬರ್ ತಿಂಗಳ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು. ಇದೀಗ ಇಂತವುದೇ ಮತ್ತೊಂದು ಪ್ರಕರಣ ನಡೆದಿದೆ.

ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಬಾಖರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 60 ವರ್ಷದ ಯಶೋಧ ಸಾಹು ಮೃತಪಟ್ಟವರಾಗಿದ್ದಾರೆ. ಇವರು ತಮ್ಮ ಸಹೋದರನ ಮೊಮ್ಮಗಳ ವಿವಾಹ ಕಾರ್ಯಕ್ರಮದ ಸಲುವಾಗಿ ಭೀಮ ಗಡ್ ಗ್ರಾಮದಿಂದ ಆಗಮಿಸಿದ್ದರು.

ಮದುವೆ ಸಂಭ್ರಮದ ವೇಳೆ ತಮ್ಮ ಇತರೆ ಮೂವರು ಸಹೋದರಿಯರ ಜೊತೆ ಯಶೋಧ ಅವರು ನೃತ್ಯ ಮಾಡುವ ವೇಳೆ ಹೃದಯಘಾತಕ್ಕೊಳಗಾಗಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸಿಯೋನಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.

— Free Press Journal (@fpjindia) December 16, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...