alex Certify BIG NEWS: ಓಮಿಕ್ರಾನ್ ಭೀತಿ, ಜಗತ್ತಿನಲ್ಲಿ 4 ಸಾವಿರ ವಿಮಾನಗಳ ಸಂಚಾರ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಓಮಿಕ್ರಾನ್ ಭೀತಿ, ಜಗತ್ತಿನಲ್ಲಿ 4 ಸಾವಿರ ವಿಮಾನಗಳ ಸಂಚಾರ ರದ್ದು

ನ್ಯೂಯಾರ್ಕ್‌: ಜಗತ್ತಿನಲ್ಲಿ ಸದ್ಯ ಕೊರೊನಾ ರೂಪಾಂತರಿಯ ಅಟ್ಟಹಾಸ ಹೆಚ್ಚಾಗುತ್ತಿದ್ದು, ಎಲ್ಲೆಡೆ ಆತಂಕ ಆವರಿಸಿದೆ. ಹೀಗಾಗಿ ಜನ – ಜೀವನ ಮತ್ತೆ ಅಸ್ತವ್ಯಸ್ಥಗೊಳ್ಳುತ್ತಿದೆ. ಭಾನುವಾರ ಒಂದೇ ದಿನ ಓಮಿಕ್ರಾನ್ ಭಯದಿಂದಾಗಿ ಜಗತ್ತಿನಲ್ಲಿ ಬರೋಬ್ಬರಿ 4 ಸಾವಿರಕ್ಕೂ ಅಧಿಕ ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ.

ಭಾನುವಾರದ ರಜಾ ದಿನವೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಿಮಾನ ಸಂಚಾರ ರದ್ದುಗೊಂಡಿದ್ದಕ್ಕೆ ಎಲ್ಲೆಡೆ ಮತ್ತಷ್ಟು ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಹೀಗಾಗಿ ಜಗತ್ತಿನಲ್ಲಿ ಒಂದೇ ದಿನ 4 ಸಾವಿರ ವಿಮಾನ ಸಂಚಾರ ರದ್ದಾಗಿದ್ದು, ಈ ಸಂಖ್ಯೆಯಲ್ಲಿನ ಅರ್ಧದಷ್ಟು ವಿಮಾನಗಳು ಅಮೆರಿಕದಲ್ಲಿಯೇ ರದ್ದಾಗಿರುವ ಕುರಿತು ವರದಿಯಾಗಿದೆ.

ಫ್ಲೈಟ್‌ ಅವೇರ್‌ ಡಾಟ್‌ ಕಾಂ ವರದಿಯಂತೆ, ಸೌತ್ ವೆಸ್ಟ್ ಹಾಗೂ ಸ್ಕೈ ವೆಸ್ಟ್ ಕಂಪನಿಯ ವಿಮಾನಗಳು ಹೆಚ್ಚಾಗಿ ರದ್ದಾಗಿವೆ. ಭಾನುವಾರ ಅಮೆರಿಕದಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆ ಸೇರಿದಂತೆ 2400 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಅಲ್ಲದೇ, ಇದೇ ಸಮಯದಲ್ಲಿ ಜಗತ್ತಿನಲ್ಲಿ ಈ ಅವಧಿಯಲ್ಲಿಯೇ 11,200 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ಜಗತ್ತಿನಲ್ಲಿ ಉಂಟಾದ ಹವಾಮಾನ ವೈಪರೀತ್ಯ ಹಾಗೂ ಕೊರೊನಾ ರೂಪಾಂತರಿಯಿಂದಾಗಿ ವಿಮಾನ ಸಂಚಾರ ರದ್ದಾಗಿವೆ. ಹೊಸ ವರ್ಷ ಹಾಗೂ ಕ್ರಿಸ್ ಮಸ್ ಹಬ್ಬದ ಈ ಸಂದರ್ಭದಲ್ಲಿ ವಿಮಾನ ಸಂಚಾರದ ಬೇಡಿಕೆ ಹೆಚ್ಚಾಗಿರುತ್ತದೆ. ಆದರೆ, ಈ ಸಂದರ್ಭದಲ್ಲಿಯೇ ವಿಮಾನಗಳು ರದ್ದಾಗಿದ್ದಕ್ಕೆ ಕಂಪನಿಗಳಿಗೆ ಹೆಚ್ಚಿನ ನಷ್ಟ ಉಂಟಾಗಿದೆ.

ಓಮಿಕ್ರಾನ್ ನಿಂದಾಗಿ ವಿಮಾನದ ಸಿಬ್ಬಂದಿ ಹಾಗೂ ಪೈಲಟ್ ಗಳು ಕ್ವಾರಂಟೈನ್ ಗೆ ಒಳಗಾಗಿದ್ದರಿಂದಾಗಿ ಕೂಡ ವಿಮಾನ ಸಂಚಾರ ರದ್ದಾಗಿವೆ ಹಾಗೂ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗಿದೆ.

ಅಮೆರಿಕದಲ್ಲಿ ವರ್ಕ್ ಫ್ರಮ್ ಹೋಮ್ ನಲ್ಲಿದ್ದ ಸಿಬ್ಬಂದಿಗೆ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿದ್ದಕ್ಕೆ ವಿಮಾನ ಸಂಚಾರ ಮಾಡುವವರ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗಿತ್ತು. ಆದರೆ, ಸಿಬ್ಬಂದಿ ಕೊರತೆಯಿಂದಾಗಿ, ಓಮಿಕ್ರಾನ್ ನಿಂದಾಗಿ ವಿಮಾನ ರದ್ದಾಗಿದ್ದಕ್ಕೆ ಕೂಡ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...