alex Certify ʼಒಮಿಕ್ರಾನ್‌ʼ ಕುರಿತು ಮಹತ್ವದ ಮಾಹಿತಿ ನೀಡಿದ ಅಮೆರಿಕ ಸಾಂಕ್ರಮಿಕ ರೋಗ ತಜ್ಞ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಒಮಿಕ್ರಾನ್‌ʼ ಕುರಿತು ಮಹತ್ವದ ಮಾಹಿತಿ ನೀಡಿದ ಅಮೆರಿಕ ಸಾಂಕ್ರಮಿಕ ರೋಗ ತಜ್ಞ

Omicron puzzle: Fauci says possibly mild cases, WHO expert warns about hospitalisations | World News - Hindustan Times

ಒಮಿಕ್ರಾನ್ ಅವತಾರಿ ಕೋವಿಡ್ ಆರಂಭಿಕ ಹಂತದಲ್ಲಿ ಡೆಲ್ಟಾಗಿಂತ ಅಪಾಯಕಾರಿಯಲ್ಲ ಎನಿಸುತಿದೆ ಎಂದು ಅಮೆರಿಕದ ಸಾಂಕ್ರಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ.

ಈ ಹೊಸ ಅವತಾರದ ವೈರಸ್ ದಕ್ಷಿಣ ಆಫ್ರಿಕಾದಲ್ಲಿ ವ್ಯಾಪಕವಾಗುತ್ತಿದ್ದರೂ ಸಹ, ಆಸ್ಪತ್ರಗೆ ಜನ ದಾಖಲಾಗುವ ಪ್ರಮಾಣದಲ್ಲಿ ಅಂಥ ಏರಿಕೆಯಾಗಿಲ್ಲ. ಆದರೂ ಸಹ ಆರಂಭಿಕ ಅಂಕಿಅಂಶಗಳ ಆಧಾರದ ಮೇಲೆ ಒಮಿಕ್ರಾನ್‌ ಅನ್ನು ಗಂಭೀರವಾಗಿ ಪರಿಗಣಿಸದೇ ಇರಲು ಆಂಥೋನಿ ಫೌಸಿ ಎಚ್ಚರಿಸಿದ್ದಾರೆ.

“ಇದುವರೆಗೂ, ಒಮಿಕ್ರಾನ್‌ನ ತೀವ್ರತೆ ಅಷ್ಟಾಗಿ ಇರುವಂತೆ ಕಾಣುತ್ತಿಲ್ಲ. ಆದರೆ ನಾವು ಈ ಬಗ್ಗೆ ಯಾವುದೇ ನಿರ್ಣಯಕ್ಕೆ ಬರುವ ಮುನ್ನ ನಿಜಕ್ಕೂ ಎಚ್ಚರಿಕೆಯಿಂದ ಇರಬೇಕು, ಇಲ್ಲವಾದರಲ್ಲಿ ತೀವ್ರ ಅನಾರೋಗ್ಯ ಉದ್ಭವಿಸುವ ಸಾಧ್ಯತೆ ಇರುತ್ತದೆ,” ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ರ ಮುಖ್ಯ ವೈದ್ಯಕೀಯ ಸಲಹೆಗಾರ ತಿಳಿಸಿದ್ದಾರೆ.

BIG NEWS: ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ…; ಸಚಿವ ಸುಧಾಕರ್ ಸ್ಪಷ್ಟನೆ

ಅಮೆರಿಕದ 17 ರಾಜ್ಯಗಳಲ್ಲಿ ಒಮಿಕ್ರಾನ್ ಹಬ್ಬಿದ್ದರೂ ಸಹ ಆಫ್ರಿಕಾದ ದಕ್ಷಿಣ ಭಾಗದ ದೇಶಗಳ ಮೇಲೆ ಪ್ರಯಾಣ ನಿರ್ಬಂಧ ಮಾಡುವ ಕುರಿತಾಗಿ ಬಿಡೆನ್ ಆಡಳಿತ ಇನ್ನೂ ಮೌಲ್ಯಮಾಪನ ಮಾಡುತ್ತಿರುವುದಾಗಿ ಫೌಸಿ ತಿಳಿಸಿದ್ದಾರೆ.

ಒಮಿಕ್ರಾನ್‌ನ ಬಹುತೇಕ ಪ್ರಕರಣಗಳು ಗಂಭೀರವಾಗಿಲ್ಲದೇ ಇದ್ದರೂ ಸಹ ಮುಂದಿನ ದಿನಗಳಲ್ಲಿ ಆಸ್ಪತ್ರೆ ಸೇರಬೇಕಾದ ಅಗತ್ಯ ಉದ್ಭವಿಸುವ ಸಾಧ್ಯತೆ ಬಹಳ ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಎಪಿಡೆಮಿಯಾಲಾಜಿಸ್ಟ್ ಆಗಿರುವ ಡಾ. ಮಾರಿಯಾ ವಾನ್ ಕೆರ್ಕೋವೇ ತಿಳಿಸಿದ್ದಾರೆ.

“ಕೆಲವರಿಗೆ ಐಸಿಯುಗೆ ಹೋಗಬೇಕಾಗಿ ಬರಬಹುದು ಹಾಗೂ ಕೆಲವರು ಸಾಯಲೂಬಹುದು.. ಅದಾಗಲೇ ಡೆಲ್ಟಾ ಜಾಗತಿಕ ಮಟ್ಟದಲ್ಲಿ ವ್ಯಾಪಿಸಿ ಕಾಟ ಕೊಡುತ್ತಿರುವ ನಡುವೆ ನಮಗೆ ಇದನ್ನೆಲ್ಲಾ ನೋಡಲು ಇಷ್ಟವಿಲ್ಲ,” ಎಂದು ಮಾರಿಯಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...