alex Certify ಸಿನಿಮಾ ಪ್ರಚಾರದ ವೇಳೆ ಗಿನ್ನಿಸ್ ದಾಖಲೆ ಬರೆದ ಬಾಲಿವುಡ್ ನಟ…! ಮೂರು ನಿಮಿಷದಲ್ಲಿ 184 ‘ಸೆಲ್ಫಿ’ ಕ್ಲಿಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ಪ್ರಚಾರದ ವೇಳೆ ಗಿನ್ನಿಸ್ ದಾಖಲೆ ಬರೆದ ಬಾಲಿವುಡ್ ನಟ…! ಮೂರು ನಿಮಿಷದಲ್ಲಿ 184 ‘ಸೆಲ್ಫಿ’ ಕ್ಲಿಕ್

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರ ‘ಸೆಲ್ಫಿ’ ಪ್ರಚಾರ ಕಾರ್ಯದ ಸಂದರ್ಭದಲ್ಲಿಯೇ ಗಿನ್ನಿಸ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮೂರು ನಿಮಿಷದ ಅವಧಿಯಲ್ಲಿ 184 ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಮೂಲಕ ಅಕ್ಷಯ್ ಕುಮಾರ್ ಹೊಸ ಗಿನ್ನಿಸ್ ದಾಖಲೆ ಬರೆದಿದ್ದು, ಈ ಮೊದಲು ಅಮೆರಿಕದ ಜೇಮ್ಸ್ ಸ್ಮಿತ್ ಎಂಬವರು ಮೂರು ನಿಮಿಷದಲ್ಲಿ 168 ಸೆಲ್ಫಿ ಹಾಗೂ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಇದಕ್ಕೂ ಮೊದಲು ಮೂರು ನಿಮಿಷದ ಅವಧಿಯಲ್ಲಿ 105 ಸೆಲ್ಫಿ ತೆಗೆದುಕೊಂಡಿದ್ದರು.

ಈ ದಾಖಲೆಯನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂದಿರುವ ಅಕ್ಷಯ್ ಕುಮಾರ್, ಇದೇ ಸಂದರ್ಭದಲ್ಲಿ ಮಾಧ್ಯಮ ಒಂದರ ಜೊತೆ ಮಾತನಾಡುವ ವೇಳೆ ಭಾರತವೇ ನನಗೆ ಸರ್ವಸ್ವವಾಗಿದ್ದು, ಕೆನಡಾ ಪೌರತ್ವ ತೊರೆಯುತ್ತಿದ್ದೇನೆ ಎಂದಿದ್ದಾರೆ. ಈಗಾಗಲೇ ಈ ಕುರಿತು ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...