alex Certify ಅಚ್ಚರಿಗೆ ಕಾರಣವಾಗಿತ್ತು ಚಿತ್ರವೊಂದಕ್ಕೆ ಬಂದ ಭಿನ್ನ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿತ್ತು ಚಿತ್ರವೊಂದಕ್ಕೆ ಬಂದ ಭಿನ್ನ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದು ಸದ್ಯ ವೈರಲ್ ಆಗಿದೆ. ಈ ಫೋಟೋ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಇದು ಹುಡುಗಿಯಾ ಚಿತ್ರವೋ ಅಥವಾ ವಯಸ್ಸಾದ ಮಹಿಳೆಯ ಚಿತ್ರವೋ ಅಂತಾ ಗೊಂದಲಕ್ಕೊಳಗಾಗಿದ್ದಾರೆ.

ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿವಿಯ ಇಬ್ಬರು ಮನೋವಿಜ್ಞಾನ ಪ್ರಾಧ್ಯಾಪಕರು 2018ರ ಅಧ್ಯಯನವನ್ನು ಪ್ರಕಟಿಸಿದ್ದಾರೆ. ಈ ಚಿತ್ರ ನೋಡಿದ ವಯಸ್ಸಾದ ವ್ಯಕ್ತಿಗಳು ಇದೊಂದು ವಯಸ್ಸಾದ ಮಹಿಳೆಯ ಚಿತ್ರ ಎಂದು ಗಮನಿಸಿದರೆ, ಯುವಕರು ಇದು ಚಿಕ್ಕ ಹುಡುಗಿಯ ಚಿತ್ರ ಎಂದು ಹೇಳಿದರು.

BIG NEWS: ರಾಜ್ಯದಲ್ಲಿಂದು 1220 ಜನರಿಗೆ ಸೋಂಕು, ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಸಂಶೋಧನೆಯು 18ರಿಂದ 68 ವಯಸ್ಸಿನ 393 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಚಿತ್ರವನ್ನು ಅರ್ಧ ಸೆಕೆಂಡ್ ಗಳ ಕಾಲ ತೋರಿಸಿ, ನಂತರ ಅವರಲ್ಲಿ ಗುರುತಿಸಿದ ಆಕೃತಿಯ ಲಿಂಗ ಹಾಗೂ ವಯಸ್ಸನ್ನು ತಿಳಿಸಲು ಕೇಳಲಾಯಿತು. ಈ ವೇಳೆ ಯುವಜನತೆ ಹಾಗೂ ವಯಸ್ಸಾದ ವ್ಯಕ್ತಿಗಳು, ಚಿಕ್ಕ ಹುಡುಗಿಯ ಚಿತ್ರ ಹಾಗೂ ವಯಸ್ಸಾದ ಮಹಿಳೆಯ ಚಿತ್ರ ಎಂದು ಉತ್ತರಿಸಿದ್ದಾರೆ.

ವಯಸ್ಸಿನ ಪಕ್ಷಪಾತವು ಚಿತ್ರದ ಆರಂಭಿಕ ಅರ್ಥ ವಿವರಣೆಯ ಮೇಲೆ ಪ್ರಭಾವ ಬೀರುತ್ತದೆಯೇ ಎಂಬುದನ್ನು ಕಂಡುಹಿಡಿಯುವುದು ಸಂಶೋಧನೆಯ ಉದ್ದೇಶವಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...