alex Certify ಕಣ್ಣಂಚನ್ನು ತೇವಗೊಳಿಸುತ್ತೆ ವೃದ್ದ ದಂಪತಿಯ ಹೃದಯಸ್ಪರ್ಶಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ವೃದ್ದ ದಂಪತಿಯ ಹೃದಯಸ್ಪರ್ಶಿ ವಿಡಿಯೋ

ವಯಸ್ಸಾದ ಮಹಿಳೆ ಹಾಸಿಗೆ ಮೇಲಿರುವ ತನ್ನ ಪತಿಯನ್ನು ಉದ್ದೇಶಿಸಿ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರ ಮನಸ್ಸು ಕದಲಿಸಿದ್ದು, ನೋಡುಗರಲ್ಲಿ ಕಣ್ಣೀರು ತರಿಸಬಹುದು.

ಇದೀಗ ವೈರಲ್​ ಆಗಿರುವ ವಿಡಿಯೋವನ್ನು ಗುಡ್​ ನ್ಯೂಸ್​ ಮೂವ್​ಮೆಂಟ್​ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದೆ. ಚಿಕ್ಕ ಕ್ಲಿಪ್​ನಲ್ಲಿ, ವಯಸ್ಸಾದ ಮಹಿಳೆ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದ ತನ್ನ ಪತಿಗೆ ಹಾಡುವುದನ್ನು ಕಾಣಬಹುದು. ಹಾಡುತ್ತಿರುವಾಗ ಮಹಿಳೆ ಭಾವುಕಳಾದರೆ ಪತಿ ಆಕೆ ಕಣ್ಣೀರು ಒರೆಸಿದ್ದು ನೋಡಿದರೆ ಅವರ ಪ್ರೀತಿಯ ಗಂಭೀರತೆ ಅರ್ಥವಾಗುತ್ತದೆ.

ಅಜ್ಜನ ಬಗ್ಗೆ ತಮಗಿರುವ ಭಾವನೆಯನ್ನು ಆ ಅಜ್ಜಿ ಹಾಡಿನ ರೂಪದಲ್ಲಿ ಹೇಳುತ್ತಿದ್ದಾರೆ. ಅಜ್ಜನಿಗೋ ಪತ್ನಿಯ ಭಾವನೆ ಅರ್ಥ ಮಾಡಿಕೊಂಡು ಸ್ಪಂದಿಸುವುದು ನಿಜಕ್ಕೂ ಭಾವನಾತ್ಮಕವಾಗಿದೆ. ನೆಟ್ಟಿಗರನೇಕರು ಕಾಮೆಂಟ್​ ಮಾಡಿ ತಮ್ಮ ಅಭಿಪ್ರಾಯ ನೀಡಿದ್ದಾರೆ. “ನಿಜವಾದ ಪ್ರೀತಿ ! ಅನಾರೋಗ್ಯ ಮತ್ತು ಆರೋಗ್ಯದಲ್ಲಿ, ಮರಣದ ತನಕ ನಮ್ಮನ್ನು ಭಾಗವಾಗಿಸುತ್ತದೆ” ಎಂದು ಬಳಕೆದಾರರು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...