alex Certify ಸೀರೆಯುಟ್ಟ ವೃದ್ಧ ಮಹಿಳೆ ಪತಿಯನ್ನು ಮೊಪೆಡ್​ನಲ್ಲಿ ಕರೆದೊಯ್ಯುವ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆಯುಟ್ಟ ವೃದ್ಧ ಮಹಿಳೆ ಪತಿಯನ್ನು ಮೊಪೆಡ್​ನಲ್ಲಿ ಕರೆದೊಯ್ಯುವ ವಿಡಿಯೋ ವೈರಲ್​

ಪುರುಷರು ತಮ್ಮ ಪತ್ನಿಯನ್ನು ಬೈಕ್​ನಲ್ಲಿ ಹಿಂಬದಿ ಕೂರಿಸಿಕೊಂಡು ಹೋಗುವುದು ಬಲು ಸಾಮಾನ್ಯ. ಆದರೆ ರೋಲ್​- ರಿವರ್ಸಲ್​ನಲ್ಲಿ, ವಯಸ್ಸಾದ ಮಹಿಳೆಯೊಬ್ಬರು ತನ್ನ ಪತಿಯನ್ನು ಮೊಪೆಡ್​ನಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

ಈ ಮಧುರ ಕ್ಷಣದ ವಿಡಿಯೋ ವೆೈರಲ್​ ಆಗಿದ್ದು, ವಯಸ್ಸಾದ ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ಸವಾರಿ ಮಾಡುತ್ತಿರುವುದು ಕಾಣಿಸುತ್ತದೆ. ಈ ವಿಡಿಯೋವನ್ನು ಸುಸ್ಮಿತಾ ಡೋರಾ ಎಂಬುವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ, ಸೀರೆಯುಟ್ಟ ಮಹಿಳೆಯ ಹಿಂದೆ ಮೊಪೆಡ್​ನಲ್ಲಿ ಬಿಳಿ ಬಟ್ಟೆಯಲ್ಲಿರುವ ವೃದ್ಧರು ಹಿಂಬದಿಯ ಸೀಟಿನಲ್ಲಿ ಕುಳಿತಿರುವುದನ್ನು ಕಾಣಬಹುದು.

ವೀಡಿಯೋ ಇರುವ ಸ್ಥಳ ದೃಢಪಟ್ಟಿಲ್ಲವಾದರೂ, ತಮಿಳುನಾಡಿನ ದ್ವಿಚಕ್ರ ವಾಹನದ ಸಂಖ್ಯೆ ಕಾಣಿಸುತ್ತದೆ. “ಕಪಲ್​ ಗೋಲ್ಸ್​,” ಎಂದು ವಿಡಿಯೋದ ಶೀರ್ಷಿಕೆ ಇದೆ. ನೆಟ್ಟಿಗರು ಇದನ್ನು ನೋಡಿ ಖುಷಿಪಟ್ಟು ಕಾಮೆಂಟ್​ ಮಾಡಿದ್ದಾರೆ. ಏಕೆ ಮಹಿಳೆಯರು ಯಾವಾಗಲೂ ಹಿಂದೆ. ಇದು ನಿಜವಾಗಿಯೂ ಪ್ರೀತಿದಾಯಕವಾಗಿದೆ ಎಂದು ಒಬ್ಬರು ಕಾಮೆಂಟ್​ ಮಾಡಿದ್ದರೆ, ದಕ್ಷಿಣ ಭಾರತದಲ್ಲಿ ಇದು ಸಾಮಾನ್ಯ ಎಂದು ಕೆಲವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...