alex Certify BIG NEWS: ರಾಜ್ಯದಲ್ಲಿಂದು 1220 ಜನರಿಗೆ ಸೋಂಕು, ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿಂದು 1220 ಜನರಿಗೆ ಸೋಂಕು, ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1220 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 1175 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,53,064 ಕ್ಕೆ ಏರಿಕೆಯಾಗಿದೆ.

ಇದುವರೆಗೆ 28,97,254 ಜನ ಗುಣಮುಖರಾಗಿದ್ದು, 37,380 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇವತ್ತು 19 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇವತ್ತು 1,79,227 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 0.68 ರಷ್ಟು ಇದೆ. 18,404 ಸಕ್ರಿಯ ಪ್ರಕರಣಗಳು ಇವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 319 ಜನರಿಗೆ ಸೋಂಕು ತಗುಲಿದ್ದು, 8 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 202 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7718 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಮಾಹಿತಿ:

ಬಾಗಲಕೋಟೆ 1, ಬಳ್ಳಾರಿ 8, ಬೀದರ್ 0, ಚಾಮರಾಜನಗರ 5, ಚಿಕ್ಕಬಳ್ಳಾಪುರ 3, ದಾವಣಗೆರೆ 8, ಧಾರವಾಡ 9, ಗದಗ 4, ಹಾವೇರಿ 3, ಕಲ್ಬುರ್ಗಿ 3, ಕೋಲಾರ 9, ಕೊಪ್ಪಳ 2, ರಾಯಚೂರು 0, ರಾಮನಗರ 3, ವಿಜಯಪುರ 0, ಯಾದಗಿರಿ 3 ಪ್ರಕರಣ ವರದಿಯಾಗಿವೆ.

ಬೆಂಗಳೂರು ನಗರ 319, ದಕ್ಷಿಣಕನ್ನಡ 232, ಹಾಸನ 81, ಕೊಡಗು 64, ಮೈಸೂರು 86, ತುಮಕೂರು 51, ಉಡುಪಿ 150 ಹೊಸ ಪ್ರಕರಣ ವರದಿಯಾಗಿವೆ.

ಮೃತಪಟ್ಟವರ ಸಂಖ್ಯೆ:

ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 8, ದಕ್ಷಿಣಕನ್ನಡ 4, ಧಾರವಾಡ 1, ಕೋಲಾರ 1, ಮಂಡ್ಯ 1, ಉತ್ತರಕನ್ನಡ 2, ವಿಜಯಪುರ 1 ಸೇರಿ ರಾಜ್ಯದಲ್ಲಿ 19 ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...