alex Certify ಸ್ಪೀಡ್‌ ಬೋಟ್ ಅಟ್ಟಿಸಿಕೊಂಡು ಹೋಗುತ್ತಿರುವ ಆರ್ಕಾ ತಿಮಿಂಗಿಲ; ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪೀಡ್‌ ಬೋಟ್ ಅಟ್ಟಿಸಿಕೊಂಡು ಹೋಗುತ್ತಿರುವ ಆರ್ಕಾ ತಿಮಿಂಗಿಲ; ಹಳೆ ವಿಡಿಯೋ ಮತ್ತೆ ವೈರಲ್

ಆರ್ಕಾ ತಿಮಿಂಗಿಲದ ವೇಗದ ಪರಿಚಯ ನೀಡುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಪೀಡ್‌ ಬೋಟ್ ಒಂದನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಈ ತಿಮಿಂಗಿಲ ಅದೆಷ್ಟು ಸಲೀಸಾಗಿ ಅಷ್ಟು ವೇಗ ಪಡೆಯುತ್ತದೆ ಎಂದು ನೋಡಿದ ನೆಟ್ಟಿಗರು ಹೌಹಾರಿದ್ದಾರೆ.

2014ರಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋ ಇದೀಗ ಅಂತರ್ಜಾಲದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ತಿಮಿಂಗಿಲದ ವೇಗ ಕಂಡು ನೆಟ್ಟಿಗರು ದಂಗುಬಡಿದು ಕಾಮೆಂಟ್‌ಗಳನ್ನು ಹಾಕಿದ್ದಾರೆ.

ಅನಾಮಧೇಯ ಪ್ರದೇಶದಲ್ಲಿ ಸೆರೆ ಹಿಡಿಯಲಾದ ಈ ವಿಡಿಯೋವನ್ನು ನೀರಿನಾಳದ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲಾಗಿದೆ.

ಕಿಲ್ಲರ್‌ ತಿಮಿಂಗಿಲಗಳು ಎಂದೇ ಖ್ಯಾತವಾಗಿರುವ ಆರ್ಕಾ ತಿಮಿಂಗಿಲಗಳು ಸಾಗರದಲ್ಲಿರುವ ಅತ್ಯಂತ ವೇಗದ ಜೀವಿಗಳ ಗುಂಪಿಗೆ ಸೇರುತ್ತವೆ. ಗಂಟೆಗೆ 34 ಮೈಲಿಯಷ್ಟು ವೇಗದಲ್ಲಿ ಈಜಬಲ್ಲ ಈ ತಿಮಿಂಗಿಲಗಳು ಚಾಣಾಕ್ಷ ಬೇಟೆಗಾರರೂ ಆಗಿವೆ. 30-50 ವರ್ಷಗಳವರೆಗೆ ಜೀವಿಸಬಲ್ಲ ಈ ತಿಮಿಂಗಿಲಗಳು ತಮ್ಮ ಕಪ್ಪು-ಬಿಳುಪು ಚರ್ಮದಿಂದಲೂ ಗುರುತಿಸಲ್ಪಡುತ್ತವೆ. ಸಣ್ಣಪುಟ್ಟ ಮೀನುಗಳು, ಪೆಂಗ್ವಿನ್‌ಗಳು, ಸೀಲ್‌ಗಳು, ಶಾರ್ಕ್‌ಗಳು ಹಾಗೂ ಇತರೆ ತಳಿಯ ತಿಮಿಂಗಿಲಗಳನ್ನೂ ಸಹ ಆರ್ಕಾ ತಿಮಿಂಗಿಲಗಳ ತಿಂದು ಹಾಕುತ್ತವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...