alex Certify ಸ್ವೀಡನ್ ಕರವಾಳಿಯಲ್ಲಿ ಕಾಣಿಸಿಕೊಂಡ ರಷ್ಯನ್ ’ಬೇಹುಗಾರ’ ತಿಮಿಂಗಿಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವೀಡನ್ ಕರವಾಳಿಯಲ್ಲಿ ಕಾಣಿಸಿಕೊಂಡ ರಷ್ಯನ್ ’ಬೇಹುಗಾರ’ ತಿಮಿಂಗಿಲ

ರಷ್ಯನ್ ನೌಕಾಪಡೆಯಿಂದ ಬೇಹುಗಾರಿಕಾ ತರಬೇತಿ ಪಡೆದಿದೆ ಎಂದು ಶಂಕಿಸಲಾದ ಬೆಲುಗಾ ತಿಮಿಂಗಿಲವೊಂದು ಸ್ವೀಡಿಶ್ ಕರಾವಳಿಯತ್ತ ಕಂಡು ಬಂದಿದೆ. 2019ರಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ತಿಮಿಂಗಿಲ ಆಗ ನಾರ್ವೇ ಕರಾವಳಿಯಲ್ಲಿ ಕಂಡು ಬಂದಿತ್ತು.,

ಸ್ವೀಡನ್‌ನ ನೈಋತ್ಯ ಕರಾವಳಿಯ ಹನ್ನೆಬೋಸ್ಟ್ರಾಮಡ್‌ ಬಳಿ ಅಡ್ಡಾಡುತ್ತಿದ್ದ ವೇಳೆ ಈ ತಿಮಿಂಗಿಲ ಜಲಜೀವಶಾಸ್ತ್ರ ತಜ್ಞರ ಕಣ್ಣಿಗೆ ಬಿದ್ದಿದೆ. ಈ ತಿಮಿಂಗಿಲದ ವಯಸ್ಸು 13-14 ವರ್ಷವಾಗಿದ್ದು, ಸಂಗಾತಿಗಳ ಹುಡುಕಾಟದಲ್ಲಿ ಅಲೆದಾಡುತ್ತಿದೆ ಎಂದು ಶಂಕಿಸಲಾಗಿದೆ.

ಈ ತಿಮಿಂಗಿಲದ ಕುತ್ತಿಗೆಯ ಬಳಿ ಪ್ಲಾಸ್ಟಿಕ್ಮ ಕ್ಲಾಸ್ಪ್‌ಗಳಿದ್ದು, ಅದರಲ್ಲಿ ಸ್ಪೈ ಕಾಮೆರಾ ಅಳವಡಿಸಿರುವ ಶಂಕೆ ಇದೆ.

ಈ ವಿಚಾರವಾಗಿ ಮಾಸ್ಕೋ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...