alex Certify ಇದ್ದಕ್ಕಿದ್ದಂತೆ ಕುಸಿದ ಎಲಿವೇಟರ್;‌ ವ್ಯಕ್ತಿಯನ್ನು ಬಲಿ ಪಡೆದ ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದ್ದಕ್ಕಿದ್ದಂತೆ ಕುಸಿದ ಎಲಿವೇಟರ್;‌ ವ್ಯಕ್ತಿಯನ್ನು ಬಲಿ ಪಡೆದ ಹಳೆ ವಿಡಿಯೋ ಮತ್ತೆ ವೈರಲ್

ಇದ್ದಕ್ಕಿದ್ದಂತೆ ಬಾಯಿ ತೆರೆದ ಎಸ್ಕಲೇಟರ್ ವ್ಯಕ್ತಿಯೊಬ್ಬನನ್ನ ತನ್ನೊಳಕ್ಕೆ ಎಳೆದುಕೊಂಡು ಆತಂಕ ಸೃಷ್ಟಿಸಿದ ಹಳೆ ವಿಡಿಯೋ ಮತ್ತೆ ವೈರಲ್ ಆಗಿದೆ.

ಅಂಡರ್ ಗ್ರೌಂಡ್ ನಿಲ್ದಾಣವೊಂದರ ಕೆಳಗೆ ದೊಡ್ಡ ರಂಧ್ರ ಕಾಣಿಸಿಕೊಂಡಿದ್ದರಿಂದ ಎಸ್ಕಲೇಟರ್‌ನೊಳಕ್ಕೆ ವ್ಯಕ್ತಿಯೊಬ್ಬರು ಅಚಾನಕ್ಕಾಗಿ ಬೀಳುತ್ತಾರೆ. ಈ ಭಯಾನಕ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ ಮತ್ತು ಹಲವರನ್ನು ಬೆಚ್ಚಿಬೀಳಿಸಿದೆ.

ಬಿಬಿಸಿ ಪ್ರಕಾರ, ಫೆಬ್ರವರಿ 2018 ರಲ್ಲಿ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಅಯಾಜಗಾ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಿಸಿ ಕ್ಯಾಮೆರಾದಲ್ಲಿ ಪ್ರಯಾಣಿಕರು ಎಸ್ಕಲೇಟರ್‌ ನಲ್ಲಿ ಹೋಗುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ ಎಸ್ಕಲೇಟರ್ ಕೆಳಗೆ ಉಂಟಾದ ದೊಡ್ಡ ಗುಂಡಿಯಿಂದಾಗಿ ಎಸ್ಕಲೇಟರ್ ಹಾಳಾಗಿ ಗುಂಡಿಯೊಳಕ್ಕೆ ವ್ಯಕ್ತಿ ಬೀಳುತ್ತಾರೆ. ಅವರ ರಕ್ಷಣೆಗೆ ಇತರರು ಮುಂದಾದ್ರೂ ಅದು ಸಾಧ್ಯವಾಗುವುದಿಲ್ಲ.

ಅಂತಿಮವಾಗಿ ಅಗ್ನಿಶಾಮಕ ದಳದಿಂದ ರಕ್ಷಿಸಲ್ಪಟ್ಟ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.

— Oddly Terrifying Things (@0ddIyterrifying) January 8, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...