ದೇಶದಲ್ಲಿ ಇಂಧನ ದರ ಮುಗಿಲು ಮುಟ್ಟಿದೆ. ಹೀಗಾಗಿ ಸಾರ್ವಜನಿಕರು ಕಂಗೆಟ್ಟಿದ್ದಾರೆ. ಅಂತವರಿಗೆ ಶುಭ ಸುದ್ದಿಯೊಂದು ಇಲ್ಲಿದೆ.
ಓಲಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಖಾನೆ ನಿರ್ಮಾಣದ ಮೊದಲ ಹಂತವು ಪೂರ್ಣಗೊಳ್ಳುವುದರಲ್ಲಿದೆ ಹಾಗೂ ಶೀಘ್ರದಲ್ಲಿಯೇ ದೇಶಿ ಮಾರುಕಟ್ಟೆಯಲ್ಲಿ ವಾಹನಗಳನ್ನ ಹೊರತರಲು ಕಂಪನಿಯು ಕಾತುರದಿಂದ ಕಾಯುತ್ತಿದೆ ಎಂದು ಓಲಾ ಗ್ರೂಪ್ ಸಿಇಓ ಭವೀಶ್ ಅಗರ್ವಾಲ್ ಹೇಳಿದ್ದಾರೆ.
ಟ್ವಿಟರ್ನಲ್ಲಿ ಈ ವಿಚಾರ ಶೇರ್ ಮಾಡಿರುವ ಅಗರ್ವಾಲ್, ಕೇವಲ ನಾಲ್ಕು ತಿಂಗಳಲ್ಲಿ ಈ ಖಾಲಿ ಸ್ಥಳವು ವಿಶ್ವದ ಅತಿದೊಡ್ಡ ಕಾರ್ಖಾನೆಯಾಗಿ ಮಾರ್ಪಟ್ಟಿದೆ. ಓಲಾ ಫ್ಯೂಚರ್ ಫ್ಯಾಕ್ಟರಿ ಹಂತ 1 ಪೂರ್ಣಗೊಳ್ಳುವುದರಲ್ಲಿದೆ. ಸ್ಕೂಟರ್ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಎಂದು ಬರೆದಿದ್ದಾರೆ.
BIG BREAKING NEWS: ರಾಜ್ಯದಲ್ಲಿಂದು 4272 ಜನರಿಗೆ ಸೋಂಕು, 115 ಮಂದಿ ಸಾವು
ಕಳೆದ ವರ್ಷ, ಓಲಾ ಕಂಪನಿಯು 2400 ಕೋಟಿ ರೂಪಾಯಿ ಮೌಲ್ಯದಲ್ಲಿ ತಮಿಳುನಾಡಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಖಾನೆಯನ್ನ ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡಿತ್ತು.
ಭವೀಶ್ ಕಾರ್ಖಾನೆ ಫೋಟೋವನ್ನೂ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಕಾರ್ಖಾನೆ ಸಂಪೂರ್ಣ ನಿರ್ಮಾಣವಾದ ಬಳಿಕ 10 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ನೀಡುವ ಉದ್ದೇಶವನ್ನ ಓಲಾ ಕಂಪನಿ ಹೊಂದಿದೆ. ಓಲಾ ಕಂಪನಿಯು ಪ್ರಸ್ತುತ ಹೈಪರ್ಚಾರ್ಜರ್ ನೆಟ್ವರ್ಕ್ ಗಾಗಿ ಕೆಲಸ ಮಾಡುತ್ತಿದೆ.