alex Certify Big News: ಎಲೆಕ್ಟ್ರಿಕ್​ ಸ್ಕೂಟರ್​ ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಓಲಾ ಬಳಿ ಸ್ಪಷ್ಟನೆ ಕೇಳಿದ ಕೇಂದ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಎಲೆಕ್ಟ್ರಿಕ್​ ಸ್ಕೂಟರ್​ ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಓಲಾ ಬಳಿ ಸ್ಪಷ್ಟನೆ ಕೇಳಿದ ಕೇಂದ್ರ

ಓಲಾ ಬಿಡುಗಡೆ ಮಾಡಿದ ಇ-ಸ್ಕೂಟರ್‌ಗೆ ಪುಣೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸರ್ಕಾರ ಕಳೆದ ತಿಂಗಳು ಈ ಬಗ್ಗೆ ತನಿಖೆಗೆ ಆದೇಶಿಸಿತ್ತು. ಈ ಘಟನೆ ಬಗ್ಗೆ ಸರ್ಕಾರವು ಓಲಾ ಎಲೆಕ್ಟ್ರಿಕ್​ ಬಳಿಯಲ್ಲಿ ವಿವರ ಕೇಳಬಹುದು ಎಂದು ಸರ್ಕಾರದ ಹಿರಿಯ ಅಧಿಕಾರಿ ನಿನ್ನೆ ಮಾಹಿತಿ ನೀಡಿದ್ದಾರೆ.

ಅವಶ್ಯಕತೆ ಬಿದ್ದಲ್ಲಿ ಘಟನೆಯ ಬಗ್ಗೆ ವಿವರಿಸಲು ಸರ್ಕಾರವು ಓಲಾ ಎಲೆಕ್ಟ್ರಿಕ್​​ನ್ನು ಕೇಳಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಗಿರಿಧರ್​ ಅರಮನೆ ತಿಳಿಸಿದ್ದಾರೆ. ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ ಘಟನೆಗೆ ಕಾರಣವಾದ ಸಂದರ್ಭಗಳನ್ನು ತನಿಖೆ ಮಾಡಲು ಮತ್ತು ಪರಿಹಾರ ಕ್ರಮಗಳನ್ನು ಸೂಚಿಸಲು CFEES ನ್ನು ಕೇಳಲಾಗಿದೆ .

ತನಿಖೆಯ ಜೊತೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತನ್ನ ಸಲಹೆಗಳನ್ನು ಹಂಚಿಕೊಳ್ಳುವಂತೆಯೂ ಕೇಂದ್ರವು CFEESನ್ನು ಕೇಳಿದೆ. ಇ ಸ್ಕೂಟರ್​ ಬೆಂಕಿಯ ಕೆನ್ನಾಲಿಗೆಯಲ್ಲಿ ಆಹುತಿಯಾದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವ್ಯಾಪಕವಾಗಿ ವೈರಲ್​ ಆದ ಬಳಿಕ ಈ ಘಟನೆಯು ಬೆಳಕಿಗೆ ಬಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...