alex Certify ಕರೆಂಟ್​ ಇಲ್ಲದೆಯೂ ಕಾರ್ಯ ನಿರ್ವಹಿಸುತ್ತೆ ಈ ವಾಷಿಂಗ್​ ಮಷಿನ್​​……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೆಂಟ್​ ಇಲ್ಲದೆಯೂ ಕಾರ್ಯ ನಿರ್ವಹಿಸುತ್ತೆ ಈ ವಾಷಿಂಗ್​ ಮಷಿನ್​​……!

ವಿದ್ಯುತ್​ ಇಲ್ಲದೇ ಕೆಲಸ ನಿರ್ವಹಿಸವ ವಾಷಿಂಗ್​ ಮಷಿನ್​ ಸಿಗುತ್ತೆ ಅಂದರೆ ಯಾರು ತಾನೇ ಬೇಡ ಅಂತಾರೆ ಹೇಳಿ. ಆದರೆ ಇದು ಕನಸಿನ ಮಾತು ಅಂತಾ ಅಂದುಕೊಂಡಿದ್ದರೆ ನಿಮ್ಮ ಯೋಚನೆ ತಪ್ಪು. ಏಕೆಂದರೆ ಓಡಿಶಾದ ಲಂಜಿಪಲ್ಲಿಯ ಬಿ. ಸತ್ಯನಾರಾಯಣ ಪತ್ರಾ ಎಂಬ ವಿದ್ಯಾರ್ಥಿಯು ವಿದ್ಯುತ್​ ಸಹಾಯವಿಲ್ಲದೇ ಕಾರ್ಯ ನಿರ್ವಹಿಸುವ ವಾಷಿಂಗ್​ ಮಷಿನ್​ನ್ನು ಕಂಡುಹಿಡಿದಿದ್ದಾನೆ. ಅಂದಹಾಗೆ ಈ ವಾಷಿಂಗ್​ ಮಷಿನ್​​ ವಿದ್ಯುತಚ್ಛಕ್ತಿ ಉಳಿತಾಯ ಮಾಡುವುದರ ಜೊತೆಗೆ ನಿಮ್ಮ ದೇಹಕ್ಕೆ ವ್ಯಾಯಾಮವನ್ನೂ ಮಾಡಿಸಲಿದೆ.

ಬೆರಹಾಂಪುರದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಸತ್ಯ ಈ ರೀತಿಯ ಹೊಸ ಅನ್ವೇಷಣೆ ಮಾಡಿದ್ದಾನೆ. ದೊಡ್ಡ ನೀರಿನ ಡ್ರಮ್​​ನ್ನು ಬೈಸಿಕಲ್​ನ ಹಿಂಭಾಗಕ್ಕೆ ಅಳವಡಿಸಲಾಗಿದೆ. ಡ್ರಮ್​​ನ ಒಳಗಿರುವ ಚೈನ್​​ನ್ನು ಬೈಸಿಕಲ್​​ನ ಚೈನ್​​ಗೆ ಸಂಪರ್ಕಿಸಲಾಗಿದೆ. ಪೆಡಲ್​​ ತುಳಿಯುತ್ತಿದ್ದಂತೆಯೇ ಬೈಸಿಕಲ್​ ನೀರಿನ ಡ್ರಮ್​ನ ಒಳಗಿರುವ ಚೈನ್​ನ್ನೂ ತಿರುಗಿಸುತ್ತದೆ. ಇದರಿಂದ ಬಟ್ಟೆ ವಾಶ್​ ಮಾಡಲಾಗುತ್ತದೆ. ಇದು ವಿದ್ಯುತ್​ ಉಳಿತಾಯ ಮಾಡಿಕೋಡೋದು ಮಾತ್ರವಲ್ಲದೇ ವ್ಯಕ್ತಿಯನ್ನು ಆರೋಗ್ಯದಾಯಕವಾಗಿಯೂ ಮಾಡುತ್ತದೆ.

ಈ ಸಾಧನವನ್ನು ಬಳಸಿ 15ರಿಂದ 20 ನಿಮಿಷಗಳಲ್ಲಿ ಬಟ್ಟೆಯನ್ನು ತೊಳೆಯಬಹುದಾಗಿದೆ. ಬಟ್ಟೆ ತೊಳೆದ ಬಳಿಕ ಡ್ರಮ್​ನ ಒಳಗಿರುವ ನೀರನ್ನು ಖಾಲಿ ಮಾಡಬಹುದಾಗಿದೆ. ಸಾಮಾನ್ಯ ವಾಷಿಂಗ್​ ಮಷಿನ್​ನಂತೆಯೇ ಕಾರ್ಯ ನಿರ್ವಹಿಸುತ್ತದೆ ಎಂದು ಸತ್ಯ ತಂದೆ ಬಿ. ಪೂರ್ಣಚಂದ್ರ ಪಾತ್ರಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...