alex Certify ಬೈಕ್ ಸವಾರ ಸೀಟ್ ಬೆಲ್ಟ್ ಧರಿಸಿಲ್ಲವೆಂದು ಸಾವಿರ ರೂಪಾಯಿ ದಂಡ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್ ಸವಾರ ಸೀಟ್ ಬೆಲ್ಟ್ ಧರಿಸಿಲ್ಲವೆಂದು ಸಾವಿರ ರೂಪಾಯಿ ದಂಡ….!

ಒಡಿಶಾ: ಒಡಿಶಾದಲ್ಲಿ ಸ್ಕೂಟರ್ ಸವಾರನೊಬ್ಬ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ! ಸ್ವಲ್ಪ ವಿಚಿತ್ರ ಎನಿಸಿದರೂ ಇದು ಸತ್ಯ. ರಾಜ್‌ಗಂಗ್‌ಪುರದ ದ್ವಿಚಕ್ರ ವಾಹನದ ಮಾಲೀಕ ಅಭಿಷೇಕ್ ಕರ್ ಅವರನ್ನು ಈ ದಂಡ ಚಿಂತೆಗೀಡು ಮಾಡಿದೆ.

ವರದಿಗಳ ಪ್ರಕಾರ, ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಅಭಿಷೇಕ್​ ಅವರಿಗೆ ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ನನಗೆ ದಂಡದ ಚಲನ್​ ಬಂದಿದೆ. ಅದರಲ್ಲಿರುವ ವಿವರಗಳನ್ನು ಪರಿಶೀಲಿಸಿದಾಗ, ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಸಾವಿರ ರೂಪಾಯಿ ದಂಡ ವಿಧಿಸಿರುವುದು ಕಂಡು ಬಂದು ಸುಸ್ತಾಗಿದ್ದೇನೆ ಎಂದಿದ್ದಾರೆ.

ಘಟನೆಯ ನಂತರ, ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದರು. ಆದರೆ ಅವರು ಅವರಿಂದ ಯಾವುದೇ ಸೂಕ್ತ ಮಾಹಿತಿ ದೊರೆತಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಎಲ್ಲಿ ಸಂಪರ್ಕಿಸಬೇಕು ಎಂದು ತಿಳಿಯದೇ ತಾವು ಅಡ್ಡಾಡುತ್ತಿರುವುದಾಗಿ ಅಭಿಷೇಕ್​ ನೋವು ತೋಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...