alex Certify ನಡುರಸ್ತೆಯಲ್ಲೇ ನಟಿಗೆ ಬಿತ್ತು ಗೂಸಾ ! ಪತಿಗೂ ಒದೆಕೊಟ್ಟ ನಟನ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲೇ ನಟಿಗೆ ಬಿತ್ತು ಗೂಸಾ ! ಪತಿಗೂ ಒದೆಕೊಟ್ಟ ನಟನ ಪತ್ನಿ

ಒಡಿಸ್ಸಾದಲ್ಲಿ ನಾಟಕೀಯ ಘಟನೆಯೊಂದು ನಡೆದಿದೆ. ತನ್ನ ಪತಿ ಸಹ ನಟಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಆರೋಪಿಸಿ ಆತನ ಪತ್ನಿ ನಡು ರಸ್ತೆಯಲ್ಲೇ ಇಬ್ಬರಿಗೂ ಥಳಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶನಿವಾರ ಬೆಳಗ್ಗೆ ಭುವನೇಶ್ವರದ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನಟ ಬಾಬುಸಾನ್ ಮೋಹಂತಿ ಸಹನಟಿ ಪ್ರಕೃತಿ ಮಿಶ್ರಾ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ಬಾಬು ಸಾನ್ ಪತ್ನಿ ತೃಪ್ತಿ ಅಡ್ಡಗಟ್ಟಿದ್ದಾರೆ. ನನ್ನ ಸಂಸಾರವನ್ನು ಹಾಳು ಮಾಡುತ್ತಿದ್ದೀಯಾ ಎಂದು ಆರೋಪಿಸಿ ಪ್ರಕೃತಿ ಮಿಶ್ರಾಗೆ ಗೂಸಾ ಕೊಟ್ಟಿದ್ದಾರೆ.

ಅಷ್ಟೇ ಅಲ್ಲ, ಕಾರಿನೊಳಗೆ ಕುಳಿತಿದ್ದ ಪತಿಯ ಶರ್ಟ್ ಹಿಡಿದು ಎಳೆದಾಡಿದ್ದು ಆತನಿಗೂ ಏಟು ಹಾಕಿದ್ದಾರೆ. ಈ ವೇಳೆ ನಟಿ ಪ್ರಕೃತಿ ಮಿಶ್ರಾ ಆಟೋ ಏರಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ತೃಪ್ತಿ ಬೆನ್ನಟ್ಟಿ ಹೋಗಿ ತಳ್ಳಿದ್ದಾರೆ.

ಜನನಿಬಿಡ ರಸ್ತೆಯಲ್ಲಿ ಏಕಾಏಕಿ ನಡೆದ ಈ ಘಟನೆಯಿಂದ ಜನರು ತಬ್ಬಿಬಾಗಿದ್ದು, ತೆರೆ ಮೇಲೆ ನೋಡುತ್ತಿದ್ದ ನಟ – ನಟಿ ಈ ರೀತಿ ರಂಪಾಟ ಮಾಡಿಕೊಂಡಿದ್ದಕ್ಕೆ ಅಚ್ಚರಿಗೊಂಡಿದ್ದಾರೆ. ವಿಷಯ ಈಗ ಪೊಲೀಸರಿಗೂ ಮುಟ್ಟಿದ್ದು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...