alex Certify BIG NEWS: ಮೆಟ್ರೋ ನಿಲ್ದಾಣಗಳಲ್ಲಿ ಮದ್ಯ ಖರೀದಿಗೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೆಟ್ರೋ ನಿಲ್ದಾಣಗಳಲ್ಲಿ ಮದ್ಯ ಖರೀದಿಗೆ ಅವಕಾಶ

ಅಧಿಕ ಜನಸಂದಣಿ ಇರುವ ಮೆಟ್ರೋ ನಿಲ್ದಾಣದಲ್ಲಿ ಮದ್ಯ ಮಾರಾಟ ಮಾಡಿ ತನ್ನ ಲಾಭ ಹೆಚ್ಚಿಸಿಕೊಳ್ಳಲು ದೆಹಲಿಯ ಅಬಕಾರಿ ಇಲಾಖೆಯು ಮೆಟ್ರೋ ನಿಲ್ದಾಣದ ಆವರಣದಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲು ಬಯಸಿದೆ.

ಬಾದರ್​ಪುರ, ದ್ವಾರಕಾ, ಕರೋಲ್​ಬಾಗ್​, ರಾಜೌರಿ ಗಾರ್ಡನ್​ ಮತ್ತು ಮುಂಡ್ಕಾ ಮೆಟ್ರೋ ನಿಲ್ದಾಣಗಳ ಆವರಣದಲ್ಲಿ ಮದ್ಯ ಮಾರಾಟ ಮಷೀನ್​ ಅಳವಡಿಸಲಾಗಿದೆ.

ಇತರ ನಿಲ್ದಾಣಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅನುಮತಿಗಾಗಿ ಸರ್ಕಾರಿ ಉದ್ಯಮಗಳು ದೆಹಲಿ ಮೆಟ್ರೋ ರೈಲು ನಿಗಮವನ್ನು (ಡಿಎಂಆರ್​ಸಿ) ಸಂಪರ್ಕಿಸುತ್ತಿವೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿಗಳು ಹೇಳುವ ಪ್ರಕಾರ ಪ್ರಕಾರ, ಮೆಟ್ರೋ ನಿಲ್ದಾಣಗಳು ಹೆಚ್ಚಿನ ಜನಸಂದಣಿಯನ್ನು ಹೊಂದಿವೆ, ಇದು ಹೆಚ್ಚಿನ ಆದಾಯವನ್ನು ಖಾತ್ರಿಪಡಿಸುವಲ್ಲಿ ದೊಡ್ಡ ಅಂಶವಾಗಿದೆ. ಹಲವಾರು ಮೆಟ್ರೋ ನಿಲ್ದಾಣಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ದೆಹಲಿ ಗ್ರಾಹಕರ ಸಹಕಾರಿ ಸಗಟು ಅಂಗಡಿ ಲಿಮಿಟೆಡ್​ ಗೆ ಮೆಟ್ರೋ ಅನುಮತಿ ನೀಡಿದೆ.

ಸೆಪ್ಟೆಂಬರ್​ ವೇಳೆಗೆ ನಗರದಾದ್ಯಂತ 500 ಮದ್ಯದ ಮಾರಾಟ ಮಳಿಗೆಗಳನ್ನು ತೆರೆಯಬೇಕು ಎಂದು ಗುರಿ ಹಾಕಿಕೊಂಡಿದ್ದು, ವರ್ಷದ ಅಂತ್ಯದ ವೇಳೆಗೆ, ಅವರು ರಾಷ್ಟ್ರ ರಾಜಧಾನಿಯಲ್ಲಿ ಇನ್ನೂ 200 ಮಳಿಗೆಗಳನ್ನು ತೆರೆಯಲು ಯೋಜಿಸಿದ್ದಾರೆ.

ಅಬಕಾರಿ ಇಲಾಖೆಯ ಅಧಿಕಾರಿಗಳ ವಿವರಿಸುವಂತೆ ಮೆಟ್ರೋ ನಿಲ್ದಾಣಗಳು ಸ್ಥಳಾವಕಾಶದ ಲಭ್ಯತೆ ಮತ್ತು ಹೆಚ್ಚಿನ ಪಾದಚಾರಿಗಳು ಸಾಗುವುದರಿಂದ ಮಾರಾಟಕ್ಕೆ ಉತ್ತಮ ಅವಕಾಶವನ್ನು ನೀಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...