alex Certify ಹಿಜಾಬ್ ವಿವಾದದ ಮಧ್ಯೆ ಪೋಷಕರಿಗೂ ಡ್ರೆಸ್ ಕೋಡ್ ವಿಧಿಸಿದ ಖಾಸಗಿ ಶಾಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಜಾಬ್ ವಿವಾದದ ಮಧ್ಯೆ ಪೋಷಕರಿಗೂ ಡ್ರೆಸ್ ಕೋಡ್ ವಿಧಿಸಿದ ಖಾಸಗಿ ಶಾಲೆ…!

ಹಿಜಾಬ್ – ಕೇಸರಿ ಶಾಲು ವಿವಾದ  ಕರ್ನಾಟಕದಲ್ಲಿ ಮುಂದುವರೆದಿದೆ. ಕೆಲವು ವಿದ್ಯಾರ್ಥಿನಿಯರು ನ್ಯಾಯಾಲಯದ ಮಧ್ಯಂತರ ಆದೇಶದ ನಂತರವೂ ನಮಗೆ ಹಿಜಾಬ್ ಮುಖ್ಯ ಎಂದು ಪರೀಕ್ಷೆಗಳಿಗೂ ಗೈರಾಗುತ್ತಿದ್ದಾರೆ.

ಹೀಗಿರುವಾಗ ಕರ್ನಾಟಕದ ಕೆಲವು ಖಾಸಗಿ ಶಾಲೆಗಳು ಪೋಷಕರಿಗೂ ಡ್ರೆಸ್ ಕೋಡ್ ವಿಧಿಸಲು ತೀರ್ಮಾನಿಸಿವೆ. ಹಲವು ಶಾಲೆಗಳು ಈಗಾಗಲೇ ಡ್ರೆಸ್ ಕೋಡ್ ವಿಧಿಸಿವೆ ಕೂಡ.

ಹೌದು, ರಾಜ್ಯವು ಹಿಜಾಬ್ ವಿವಾದದಲ್ಲಿ ಸಿಲುಕಿರುವಾಗ ರಾಜ್ಯದ ಕೆಲವು ಖಾಸಗಿ ಅನುದಾನರಹಿತ ಶಾಲೆಗಳು ಈಗ ಪೋಷಕರಿಗೂ ಡ್ರೆಸ್ ಕೋಡ್‌ ನೀಡಲು ತೀರ್ಮಾನಿಸಿವೆ.‌ ಹಲವಾರು ಪಾಲಕರು ತಮ್ಮ ಮಕ್ಕಳನ್ನು, ಶಾಲೆಗಳಿಗೆ ಬಿಡುವಾಗ ಮತ್ತು ಕರೆದುಕೊಂಡು ಹೋಗುವಾಗ ಅನೌಪಚಾರಿಕ ಉಡುಪುಗಳಲ್ಲಿ ಇರುವುದನ್ನು ಪರಿಗಣಿಸಿ, ಕೆಲವು ಖಾಸಗಿ ಅನುದಾನರಹಿತ ಶಾಲೆಗಳು ಪೋಷಕರಿಗೆ ಡ್ರೆಸ್ ಕೋಡ್ ಅನ್ನು ವಿಧಿಸಲು ಮುಂದಾಗಿವೆ ಎನ್ನಲಾಗಿದೆ.

ಹರ್ಷ ಕೊಲೆ ಪ್ರಕರಣ; ಬಂಧನವಾಗಿರುವ ಪ್ರಮುಖ ಆರೋಪಿಗಳ ಕುರಿತು ಇಲ್ಲಿದೆ ಡಿಟೇಲ್ಸ್

ಶಾಲೆ ಹೊರಡಿಸಿರುವ ಸುತ್ತೋಲೆಗಳು/ಸಂವಹನಗಳಿಂದ ಲಭ್ಯವಿರುವ ವಿವರಗಳ ಪ್ರಕಾರ, ಪೋಷಕರು ಬರ್ಮುಡಾ, ಶಾರ್ಟ್ಸ್, ಸ್ಪೋರ್ಟ್ಸ್ ಗೇರ್, ಹೌಸ್ ವೇರ್, ಸ್ಲೀವ್‌ಲೆಸ್ ಮತ್ತು ಟ್ರ್ಯಾಕ್ ಪ್ಯಾಂಟ್ ಇತ್ಯಾದಿಗಳನ್ನು ಧರಿಸುವುದನ್ನು ನಿರ್ಬಂಧಿಸಲಾಗಿದೆ.

“ಶಾಲೆಗೆ ಭೇಟಿ ನೀಡುವಾಗ ಡ್ರೆಸ್ ಕೋಡ್‌ಗೆ ಬದ್ಧರಾಗಿರಿ,‌ ಫಾರ್ಮಲ್/ಸೆಮಿ ಫಾರ್ಮಲ್, ಶಾರ್ಟ್ಸ್, ಬರ್ಮುಡಾ, ಸ್ಲೀವ್‌ಲೆಸ್, ಟ್ರ್ಯಾಕ್ ಪ್ಯಾಂಟ್‌ಗಳು, ಸ್ಪೋರ್ಟ್ಸ್ ಗೇರ್, ನೈಟ್‌ವೇರ್, ಹೌಸ್ ವೇರ್ ಧರಿಸುವುದನ್ನು ತಪ್ಪಿಸಿ ಎಂದು, ಬೆಂಗಳೂರಿನ ದಕ್ಷಿಣದಲ್ಲಿರುವ ಶಾಲೆಯೊಂದು ಸುತ್ತೋಲೆಯೊಂದನ್ನು ಹೊರಡಿಸಿದೆ.

ಶಾಲೆಯ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಪೋಷಕರ ವರ್ಗ ಈ ನಿರ್ಧಾರವನ್ನು ಸ್ವಾಗತಿಸಿ, ಮಕ್ಕಳು-ಶಿಕ್ಷಕರಿರುವ ಸ್ಥಳದಲ್ಲಿ ಸರಿಯಾದ ಡ್ರೆಸ್ ಕೋಡ್ ಮುಖ್ಯ ಎಂದಿದ್ದಾರೆ.‌ ಇನ್ನುಳಿದವರು, ಶಾಲೆಗಳು ಈಗ ಪೋಷಕರನ್ನು ನಿಯಂತ್ರಿಸಲು ಶುರು ಹಚ್ಚಿಕೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...