alex Certify ಹರ್ಷ ಕೊಲೆ ಪ್ರಕರಣ; ಬಂಧನವಾಗಿರುವ ಪ್ರಮುಖ ಆರೋಪಿಗಳ ಕುರಿತು ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರ್ಷ ಕೊಲೆ ಪ್ರಕರಣ; ಬಂಧನವಾಗಿರುವ ಪ್ರಮುಖ ಆರೋಪಿಗಳ ಕುರಿತು ಇಲ್ಲಿದೆ ಡಿಟೇಲ್ಸ್

ಹರ್ಷನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ ಪೊಲೀಸರು ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಸಾಕಷ್ಟು ಅಂಶಗಳು ಹೊರಬಿದ್ದಿದ್ದು, ಪ್ರಮುಖ ಆರೋಪಿಗಳು ಕೊಲೆಯಲ್ಲಿ ಹೇಗೆ ಭಾಗಿಯಾಗಿದ್ದರು. ಹೇಗೆ ಪ್ಲಾನ್ ಮಾಡಿ, ಎಕ್ಸಿಕ್ಯೂಟ್ ಮಾಡಿದರು ಎಂಬ ಮಾಹಿತಿ ಲಭ್ಯವಾಗಿದೆ.

ಎ1- ಖಾಸಿಫ್

32 ವರ್ಷದ ಈತ ಶಿವಮೊಗ್ಗದ ಕ್ಲಾರ್ಕ್ಸ್ ಪೇಟೆ ನಿವಾಸಿ. ಖಾಸಿಫ್ ಗ್ಯಾಂಗ್ ಮತ್ತು ಹರ್ಷನ ಗ್ಯಾಂಗ್ ಗೆ ಈ ಹಿಂದೆ ಗಲಾಟೆಯಾಗಿತ್ತು ಎನ್ನಲಾಗಿದೆ. ಅಂದಿನಿಂದ ಧ್ವೇಷ ಹೊಂದಿದ್ದ ಖಾಸಿಫ್ ಹುಡುಗರನ್ನ ರೆಡಿ ಮಾಡಿ ಅಟ್ಯಾಕ್ ಮಾಡಿಸಿದ್ದ. ಕೊಲೆ ಮಾಡಿದ್ದ ದಿನ ಈತ ಕೂಡ ಮಚ್ಚು ಬೀಸಿದ್ದ. ಈತನನ್ನು ಕ್ಲಾರ್ಕ್ ಪೇಟೆ ಮನೆಯಲ್ಲೇ ಅರೆಸ್ಟ್ ಮಾಡಲಾಗಿದೆ.

ಎ2- ನದೀಮ್

23 ವರ್ಷದ ಈತ ಕೂಡ ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ. ಕೊಲೆ ಸಂಚಿನಲ್ಲಿ ಭಾಗಿಯಾದ ಆರೋಪ ನದೀಮ್ ಮೇಲಿದೆ. ಕೊಲೆಯಾದ ದಿನ ಆರೋಪಿಗಳ ರಕ್ಷಣೆಗೆ ಸಹಾಯ ಮಾಡಿದ್ದ. ಈತನನ್ನ ಭಾನುವಾರ ಮಧ್ಯರಾತ್ರಿ ಕ್ಲಾರ್ಕ್ ಪೇಟೆಯ ಈತನ ಮನೆಯಲ್ಲಿ ವಶಕ್ಕೆ ಪಡೆಯಲಾಗಿತ್ತು.

ಎ3 – ಆಸಿಫ್ ಖಾನ್

21 ವರ್ಷದ ಈತ ಕೊಲೆ ಮಾಡುವ ಉದ್ದೇಶದಿಂದ ಖಾಸಿಫ್ ನ ಮಾತಿನಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ. ಹರ್ಷನ ಮೇಲೆ ಮಚ್ಚು ಬೀಸಿದ್ದವನಲ್ಲಿ ಎರಡನೆಯವನು ಅಸಿಫ್ ಖಾನ್.

ಎ4 – ರಿಯಾನ್ ಶರೀಫ್ @ ಖಸಿ

22 ವರ್ಷದ ಈತ ಕೂಡ ಕ್ಲಾರ್ಕ್ ಪೇಟೆ ನಿವಾಸಿ. ಕೊಲೆಗೂ ಮೊದಲು ಕಾಸಿಫ್ ನ ಪ್ಲಾನಿಂಗ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದ. ಅಲ್ಲದೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ. ಈತನನ್ನ ಹಾಸನದಲ್ಲಿ ದಸ್ತಗಿರಿ ಮಾಡಲಾಗಿದೆ.

ಎ5- ನಿಹಾನ್ @ ಮುಜಾಹಿದ್

ಈತ ಕೂಡ ಹರ್ಷನ ಕೊಲೆ ಮಾಡಿದವರಲ್ಲಿ ಪ್ರಮುಖ ಈತನ ವಯಸ್ಸು 23. ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ. ಸ್ನೇಹಿತರ ಗ್ಯಾಂಗ್ ಜೊತೆ ಇದೇ ಕ್ಲಾರ್ಕ್ ಪೇಟೆಯಲ್ಲಿ ಮೀಟಿಂಗ್ ಮಾಡ್ತಿದ್ದ. ಖಾಸಿಫ್ ನ ಅಣತಿಯಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ. ಚಿಕ್ಕಮಗಳೂರಿನಲ್ಲಿ ಈತನನ್ನು ಅರೆಸ್ಟ್ ಮಾಡಲಾಗಿದೆ.

ಎ6 – ಅಬ್ದುಲ್ ಅಪ್ನಾನ್

ವಯಸ್ಸು ಈಗಿನ್ನು 21 ವರ್ಷ. ಕೊಲೆಯಲ್ಲಿ ಡೈರೆಕ್ಟಾಗಿ ಭಾಗಿ ಅಲ್ಲದಿದ್ರೂ ಇನ್ ಡೈರೆಕ್ಟ್ ಆಗಿ ಭಾಗಿ. ಹರ್ಷನ ಚಟುವಟಿಕೆಗಳು, ಹೋಗಿ ಬರುವ ದಾರಿ, ಒಬ್ಬಂಟಿಯಾಗಿದ್ದಾನಾ ಇಲ್ವಾ.? ಹೀಗೆ ಪ್ರತಿಯೊಂದು ಮಾಹಿತಿಯನ್ನ ಖಾಸಿಫ್ ಗೆ ನೀಡ್ತಿದ್ದ ಆರೋಪಿ. ಕೊಲೆ ಬಳಿಕ ಆರೋಪಿಗಳ ರಕ್ಷಣೆಗೆ ಪ್ರಯತ್ನ ಪಟ್ಟಿದ್ದ.

ಎ7 – ಜಿಲಾನ್

ಈತ ಕೊಲೆ ನಡೆದ ಬಳಿಕ ಆರೋಪಿಗಳನ್ನ ಕಾರ್ ನಲ್ಲಿ ಕರೆದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದ. ಸ್ವಿಫ್ಟ್ ಕಾರ್ ನಲ್ಲಿ ಭದ್ರಾವತಿ ಕಡೆ ತೆರಳಿದ್ದ. ಅಲ್ಲಿ ಎಲ್ಲರನ್ನೂ ಡೈವರ್ಟ್ ಮಾಡುವ ಕೆಲಸ ಮಾಡಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...