alex Certify GOOD NEWS: ಸಿಎನ್‌ಜಿ ರೂಪಾಂತರದಲ್ಲಿ ಟಾಟಾ 407 ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಸಿಎನ್‌ಜಿ ರೂಪಾಂತರದಲ್ಲಿ ಟಾಟಾ 407 ಬಿಡುಗಡೆ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್​ ತನ್ನ ಸಾಂಪ್ರದಾಯಿಕ ವಾಣಿಜ್ಯ ವಾಹನವಾದ ಟಾಟಾ 407ನ ಸಿಎನ್​ಜಿ ರೂಪಾಂತರಗಳನ್ನು ಬಿಡುಗಡೆ ಮಾಡಿದೆ.

ಈ ಹೊಸ ಮಾಡೆಲ್​ನ ಬೆಲೆಯು 12.07 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ. ಈ ವಾಹನವು 10 ಫೀಟ್​ ಉದ್ದ ಲೋಡ್​ ಡೆಕ್​ನ್ನು ಹೊಂದಿದೆ. ವಾಹನವು 5 ಟನ್​ನಿಂದ 16 ಟನ್​ ತೂಕದಲ್ಲಿ ಲಭ್ಯವಿದೆ ಎನ್ನಲಾಗಿದೆ.

ಡೀಸೆಲ್​ ಚಾಲಿತ 407ಗಳು 35 ಪ್ರತಿಶತದವರೆಗೆ ಲಾಭವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಟಾಟಾ 407 ಸಿಎನ್​ಜಿಯು 3.8 ಲೀಟರ್​ ಇಂಜಿನ್​ ಸಾಮರ್ಥ್ಯವನ್ನು ಹೊಂದಿದೆ, ಫ್ರಂಟ್​ ಪ್ಯಾರಾಬೋಲಿಕ್​ ಸಸ್ಪೆನ್ಶನ್​ ಹೊಂದಿದೆ. ಕ್ಲಚ್​ ಹಾಗೂ ಗಿಯರ್​ ಶಿಫ್ಟ್​​ ಬೇಕಾದ ಪ್ರಯತ್ನವನ್ನು ಕಡಿಮೆ ಮಾಡುತ್ತದೆ. ಯುಎಸ್​ಬಿ ಮೊಬೈಲ್​ ಚಾರ್ಜಿಂಗ್​ ಪೋರ್ಟ್​ ಹಾಗೂ ಬ್ಲೌಪಂಕ್ಟ್ ಮ್ಯೂಸಿಕ್​ ಸಿಸ್ಟಂ ಅನ್ನು ಹೊಂದಿದೆ. 407ನ ಈ ಹೊಸ ಶ್ರೇಣಿಯು ಫ್ಲೀಟ್​ ಎಡ್ಜ್​​ನ 2 ವರ್ಷಗಳ ಚಂದಾದಾರಿಕೆಯನ್ನು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...