alex Certify ವಾಹನ ಮಾಲೀಕರೇ ಗಮನಿಸಿ: ಹಳೆ ನಂಬರ್ ಪ್ಲೇಟ್ ಬದಲು HSRP ಅಳವಡಿಸಲು ನ.17 ರ ವರೆಗೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಮಾಲೀಕರೇ ಗಮನಿಸಿ: ಹಳೆ ನಂಬರ್ ಪ್ಲೇಟ್ ಬದಲು HSRP ಅಳವಡಿಸಲು ನ.17 ರ ವರೆಗೆ ಅವಕಾಶ

karnataka all old vehicles have hsrp number plates by november 17 gvd

ವಾಹನಗಳ ಮಾಲೀಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ವಾಹನಗಳ ಹಳೆ ನಂಬರ್ ಪ್ಲೇಟ್ ಬದಲಿಗೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಸುವುದನ್ನು ಸಾರಿಗೆ ಇಲಾಖೆ ಕಡ್ಡಾಯಗೊಳಿಸಿದ್ದು, ಇದನ್ನು ಬದಲಾಯಿಸಲು ನವೆಂಬರ್ 17ರ ವರೆಗೆ ಕಾಲಾವಕಾಶ ನೀಡಲಾಗಿದೆ.

2019ರ ಏಪ್ರಿಲ್ 1ರ ನಂತರ ನೋಂದಣಿಯಾಗಿರುವ ವಾಹನಗಳಲ್ಲಿ ಈಗಾಗಲೇ ಅತಿ ಸುರಕ್ಷಿತ ನೋಂದಣಿ ಫಲಕ (ಹೆಚ್.ಎಸ್.ಆರ್.ಪಿ) ಅಳವಡಿಸಲಾಗಿದ್ದು, ಹೀಗಾಗಿ ಅದಕ್ಕೂ ಹಿಂದಿನ ವಾಹನಗಳಿಗೆ ನವೆಂಬರ್ 17 ರೊಳಗಾಗಿ ಎಚ್ಎಸ್ಆರ್‌ಪಿ ಅಳವಡಿಸಬೇಕಿದೆ.

ವಾಹನಗಳ ಮಾಲೀಕರು ಶೋರೂಮ್ ಅಥವಾ ಡೀಲರ್‌ಗಳಲ್ಲಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಾಗಿ ಕೋರಿಕೆ ಸಲ್ಲಿಸಬಹುದಾಗಿದ್ದು, ನಾಲ್ಕು ಚಕ್ರದ ವಾಹನಗಳಿಗೆ 400 ರಿಂದ 500 ರೂಪಾಯಿ ಹಾಗೂ ದ್ವಿಚಕ್ರ ವಾಹನಗಳಿಗೆ 250 ರಿಂದ 300 ರೂಪಾಯಿವರೆಗೆ ಶುಲ್ಕ ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...