alex Certify ಯುವ ಜೋಡಿಯ ಲಿವ್ ಇನ್ ರಿಲೇಷನ್ ಶಿಪ್ ಕುರಿತಂತೆ ಹೈಕೋರ್ಟ್ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವ ಜೋಡಿಯ ಲಿವ್ ಇನ್ ರಿಲೇಷನ್ ಶಿಪ್ ಕುರಿತಂತೆ ಹೈಕೋರ್ಟ್ ಮಹತ್ವದ ತೀರ್ಪು

ಚಂಡೀಗಢ: ಲಿವ್ ಇನ್ ಸಂಬಂಧದಲ್ಲಿರುವ ಜೋಡಿಗಳು ಜೊತೆಯಾಗಿರುವುದರ ನಿರ್ಧಾರವನ್ನು ನ್ಯಾಯಾಲಯ ನಿರ್ಣಯಿಸುವುದಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಿಸಿದೆ.

ಪಂಜಾಬ್ ನ ಬತಿಂದಾದ 17 ವರ್ಷದ ಹುಡುಗಿ ಮತ್ತು 20 ವರ್ಷದ ಯುವಕನ ಮನವಿಯನ್ನು ಅನುಸರಿಸಿ, ಹೈಕೋರ್ಟ್ ಈ ಆದೇಶ ನೀಡಿದ್ದು, ಅವರ ಜೀವರಕ್ಷಣೆ ಮತ್ತು ಸ್ವಾತಂತ್ರ್ಯವನ್ನು ಕುಟುಂಬ ಸದಸ್ಯರು ಗಮನಿಸಬೇಕೆಂದು ಸೂಚಿಸಿದೆ.

ವಿವಾಹ ಬಂಧನವಿಲ್ಲದೆ ಯುವಕ, ಯುವತಿ ಒಟ್ಟಿಗೆ ಇರಲು ಬಯಸಿದರೆ, ಅದನ್ನು ನ್ಯಾಯಾಲಯ ತೀರ್ಮಾನಿಸುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ವಿಶೇಷವಾಗಿ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮರ್ಯಾದೆಗೇಡು ಹತ್ಯೆಗಳು ಪ್ರಚಲಿತದಲ್ಲಿವೆ ಎಂಬುದನ್ನು ನ್ಯಾಯಾಲಯ ಗಮನಿಸಿದ್ದು, ಅಂತಹ ಜೋಡಿಗಳ ರಕ್ಷಣೆಗೆ ಗಮನ ನೀಡಬೇಕೆಂದು ಹೇಳಲಾಗಿದೆ.

ಹುಡುಗಿಯ ಪೋಷಕರು ತಾವು ನೋಡಿದ ಯುವಕನೊಂದಿಗೆ ಮದುವೆಯಾಗಬೇಕೆಂದು ಬಯಸಿದ್ದಾರೆ. ನಮ್ಮ ಬಾಂಧವ್ಯದ ಕುರಿತಾಗಿ ಅವರಿಗೆ ತಿಳಿದಿಲ್ಲ. ಇದರಿಂದ ಹುಡುಗಿ ಆಕೆಯ ಮನೆಯಿಂದ ಹೊರಗೆ ಬಂದಿದ್ದು, ನಾವು ರಕ್ಷಣೆ ಕೋರಿ ಬತಿಂದಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದರೂ ಅವರು ಸ್ಪಂದಿಸಿಲ್ಲ ಎಂದು ಯುವಜೋಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.

ಪಂಜಾಬ್ ಸರ್ಕಾರದ ಎಜಿ ಅವರು, ರಕ್ಷಣೆ ಕೋರಿರುವ ಯುವಜೋಡಿ ಮದುವೆಯಾಗಿಲ್ಲ. ಇಬ್ಬರ ಇಚ್ಛೆಯನುಸಾರ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ. ಹೀಗೆ ಸಹಜೀವನದಲ್ಲಿರುವವರ ಅನೇಕರ ಅರ್ಜಿಗಳನ್ನು ಕೆಳಹಂತದ ನ್ಯಾಯಾಲಯಗಳಲ್ಲಿ ಹಿಂದೆ ವಜಾ ಮಾಡಲಾಗಿದೆ ಎಂದು ಹೇಳಿದ್ದಾರೆ.

ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಸಂತ್ ಪ್ರಕಾಶ್ ಅವರು, ಸಂವಿಧಾನದ ವಿಧಿ ಅನುಸಾರ ಜನರ ಜೀವನ, ಸ್ವಾತಂತ್ರ್ಯದ ಹಕ್ಕು ರಕ್ಷಿಸಬೇಕಿದೆ. ಕೋರ್ಟ್ ತನ್ನ ಕರ್ತವ್ಯವನ್ನು ಕೂಡ ಮಾಡಬೇಕಿದೆ. ಸಹಜೀವನ ಸರಿಯೇ ಎಂದು ನಿರ್ಧರಿಸುವುದು ಕೋರ್ಟ್ ಕೆಲಸವಲ್ಲ, ಜೋಡಿಗೆ ರಕ್ಷಣೆ ಒದಗಿಸಬೇಕು ಎಂದು ಆದೇಶಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...