alex Certify ಮದುವೆ ಸಮಾರಂಭದಲ್ಲಿ ʼಕಾಲಾ ಚಶ್ಮಾʼ ಹಾಡಿಗೆ ಕುಣಿದು ಕುಪ್ಪಳಿಸಿದ ನಾರ್ವೆ ಡಾನ್ಸರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಮಾರಂಭದಲ್ಲಿ ʼಕಾಲಾ ಚಶ್ಮಾʼ ಹಾಡಿಗೆ ಕುಣಿದು ಕುಪ್ಪಳಿಸಿದ ನಾರ್ವೆ ಡಾನ್ಸರ್ಸ್

ಬಾಲಿವುಡ್‌ನ ಕಾಲಾ ಚಶ್ಮಾ…… ಹಾಡಿಗೆ ನಿಮ್ಮ ಕಾಲುಗಳು ಕುಣಿಯದೇ ಇದ್ದರೆ ಹೇಳಿ, ಇದು ಪಾರ್ಟಿ ಸಾಂಗ್.

ಮದುವೆಯೊಂದರಲ್ಲಿ ಇದಕ್ಕೆ ನಾರ್ವೆಯ ಈ ನೃತ್ಯ ತಂಡ ಹಾಕಿದ ಹೆಜ್ಜೆಗಳು ಅದ್ಭುತವಾಗಿವೆ. ಇದರ ವಿಡಿಯೋ ವೈರಲ್‌ ಆಗಿದೆ.
ಈ ವಿಡಿಯೋದಲ್ಲಿ ‘ಕ್ವಿಕ್ ಸ್ಟೈಲ್’ ಹೆಸರಿನ ತಂಡದ ನೃತ್ಯಗಾರರ ಗುಂಪು ಮೋಜಿನ ನೃತ್ಯ ಮಾಡುತ್ತಿರುವ ದೃಶ್ಯವಿದೆ. ಅತಿಥಿಗಳು ಈ ನೃತ್ಯ ತಂಡವನ್ನು ಹುರಿದುಂಬಿಸುತ್ತಿರುವುದು ಕಂಡುಬಂದಿದೆ.

ಡ್ಯಾನ್ಸರ್‌ಗಳಲ್ಲಿ ಒಬ್ಬನಾದ ಯಾಸಿನ್ ಟ್ಯಾಟ್‌ಬಿ ಹಂಚಿಕೊಂಡ ರೀಲ್‌ಗಳು ಐದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಇನ್‌ಸ್ಟಾಗ್ರಾಂನಲ್ಲಿ 7 ಮಿಲಿಯನ್ ವೀಕ್ಷಣೆ ಗಳಿಸಿದೆ. ಅಭಿಮಾನಿಗಳು ಕೂಡ ಕಾಮೆಂಟ್ಸ್ ವಿಭಾಗದಲ್ಲಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

ನೃತ್ಯ ಸಂಯೋಜಕ ಮತ್ತು ಕಂಟೆಂಟ್ ಕ್ರಿಯೇಟರ್ ನಿಕೋಲ್ ಕಾನ್ಸೆಸ್ಸಾವ್ ಅವರು “ಓಹ್ ಮೈ ಗಾಡ್” ಎಂದು ಬರೆದಿದ್ದು, ಭರಪೂರ ಮನರಂಜನೆ ಎಂದಿದ್ದಾರೆ. ಇನ್ನೊಬ್ಬ ವೀಕ್ಷಕ, “ನನ್ನ ಮದುವೆಯಲ್ಲಿ ಇದಾಗಬೇಕು. ಇಲ್ಲದೇ ಹೋದರೆ ಮದುವೆಯೇ ಆಗಲ್ಲ” ಎಂದಿದ್ದಾರೆ.

ಅದೇ ವಿಡಿಯೋವನ್ನು ನೃತ್ಯ ಕಂಪನಿಯ ಅಧಿಕೃತ ಪುಟದಲ್ಲಿ “ಕತ್ರೀನಾ ಕೈಫ್ ನಿಮ್ಮ ಸಹೋದರನ ಮದುವೆಗೆ ಕಾಣಿಸಿಕೊಳ್ಳದಿದ್ದರೆ, ಅದನ್ನು ನೀವೇ ಮಾಡಬೇಕು” ಎಂಬ ಶೀರ್ಷಿಕೆಯೊಂದಿಗೆ ಶೇರ್‌ ಮಾಡಲಾಗಿದೆ. ಇದಲ್ಲದೆ ಬೇರೆ ಹಾಡುಗಳಿಗೂ ಈ ನೃತ್ಯ ತಂಡ ಡ್ಯಾನ್ಸ್‌ ಮಾಡಿ ಗಮನ ಸೆಳೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...