alex Certify ದಕ್ಷಿಣ ಕೊರಿಯಾದ ಚಲನಚಿತ್ರ ವೀಕ್ಷಿಸಿದ ಅಪ್ರಾಪ್ತನಿಗೆ 14 ವರ್ಷ ಜೈಲು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಕ್ಷಿಣ ಕೊರಿಯಾದ ಚಲನಚಿತ್ರ ವೀಕ್ಷಿಸಿದ ಅಪ್ರಾಪ್ತನಿಗೆ 14 ವರ್ಷ ಜೈಲು….!

ನಿಷೇಧಿಸಲಾಗಿದ್ದ ಚಿತ್ರವೊಂದನ್ನು ವೀಕ್ಷಿಸಿದ ಎಂಬ ಆಪಾದನೆಯಲ್ಲಿ ಹದಿಹರೆಯದ ಹುಡುಗನೊಬ್ಬನಿಗೆ 14 ವರ್ಷಗಳ ಜೈಲು ಶಿಕ್ಷೆ ನೀಡಿದ ಘಟನೆ ಉತ್ತರ ಕೊರಿಯಾದಲ್ಲಿ ಜರುಗಿದೆ.

ಉ. ಕೊರಿಯಾದ ಯಂಗ್ಗಾನ್ ಪ್ರಾಂತ್ಯದ ಈ ವಿದ್ಯಾರ್ಥಿ ದಕ್ಷಿಣ ಕೊರಿಯಾದ ಚಿತ್ರ ’ದಿ ಅಂಕಲ್‌’ ವೀಕ್ಷಿಸಿದ ಐದು ನಿಮಿಷಗಳ ಒಳಗೇ ಬಂಧಿತನಾಗಿದ್ದಾರೆ. ನವೆಂಬರ್‌ 30ರಂದು ಈ ಬಾಲಕ ಬಂಧಿತನಾಗಿದ್ದಾನೆ.

ಇಲ್ಲಿನ ಹ್ಯೇಸನ್ ನಗರದ ಎಲಿಮೆಂಟರಿ ಮತ್ತು ಮಧ್ಯಮ ಶಾಲೆಯಲ್ಲಿ ಬಾಲಕ ಈ ಚಿತ್ರವನ್ನು ವೀಕ್ಷಿಸುತ್ತಿದ್ದ ಎನ್ನಲಾಗಿದೆ. ಪಾಪದ ಬಾಲಕ ಈಗ 14 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾನೆ.

5 ಮಿಲಿಯನ್ ವೀಕ್ಷಣೆ ಗಳಿಸಿದೆ ಜುಗ್ನು ಸವಾಲು ಸ್ವೀಕರಿಸಿದ ವೈದ್ಯಕೀಯ ವಿದ್ಯಾರ್ಥಿನಿಯರ ನೃತ್ಯ..!

ದಕ್ಷಿಣ ಕೊರಿಯಾ ಹಾಗೂ ಅಮೆರಿಕಗಳನ್ನು ತನ್ನ ಪರಮ ವೈರಿಗಳು ಎಂದು ಪರಿಗಣಿಸಿರುವ ಉತ್ತರ ಕೊರಿಯಾದಲ್ಲಿ, ಆ ದೇಶಗಳ ಸಾಂಸ್ಕೃತಿಕ ಸರಕುಗಳನ್ನು ನಿಷೇಧಿಸಲಾಗಿದೆ. ಇಂಥ ಸರಕುಗಳ ಆಮದು ಅಥವಾ ಬಳಕೆ ಕಂಡು ಬಂದಲ್ಲಿ ತೀವ್ರ ಶಿಕ್ಷೆ ನೀಡುವ ಕಾನೂನು ಅಲ್ಲಿದೆ.

“ದಕ್ಷಿಣ ಕೊರಿಯಾದ ಚಿತ್ರಗಳ ರೆಕಾರ್ಡಿಂಗ್‌ಗಳು, ಪುಸ್ತಕಗಳು, ಹಾಡುಗಳು, ಚಿತ್ರಗಳು ಹಾಗೂ ಫೋಟೋಗಳನ್ನು ನೇರವಾಗಿ ವೀಕ್ಷಿಸಿದ, ಆಲಿಸಿ ಅಥವಾ ಇಟ್ಟುಕೊಂಡವರಿಗೆ ಐದಕ್ಕಿಂತ ಹೆಚ್ಚು ಹಾಗೂ 15ಕ್ಕಿಂತ ಕಡಿಮೆ ವರ್ಷಗಳ ಮಟ್ಟಿಗೆ ಶಿಕ್ಷೆ ನೀಡಲಾಗುತ್ತದೆ,” ಎಂದು ಬಾಲಕನ ಮೇಲೆ ಪ್ರಯೋಗಿಸಿದ ಕಾನೂನು ಹೇಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...