alex Certify ನಗು ತರಿಸುತ್ತೆ ಊಟದ ಬದಲು ಪುಟ್ಟ ಕಂದನಿಟ್ಟ ಬೇಡಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಊಟದ ಬದಲು ಪುಟ್ಟ ಕಂದನಿಟ್ಟ ಬೇಡಿಕೆ…!

ಚಿಕ್ಕ ಮಕ್ಕಳಿಗೆ ಊಟ ಮಾಡಿಸುವುದು ಎಷ್ಟು ಕಷ್ಟ ಅನ್ನೋದು ಸಾಮಾನ್ಯವಾಗಿ ಎಲ್ಲಾ ತಾಯಂದಿರಿಗೆ ಗೊತ್ತಿರುತ್ತದೆ. ಮಕ್ಕಳಿಗೆ ಊಟ ತಿನ್ನಿಸಲು ಅಮ್ಮಂದಿರು ಹೆಣಗಾಡುವುದು ಸಾಮಾನ್ಯ. ಅಲ್ಲದೆ ಮಕ್ಕಳು ಊಟದ ಬದಲು ಬೇಕರಿ ತಿಂಡಿಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಇಂಥ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ತಾಯಿಯು ತನ್ನ ಮಗುವಿಗೆ ಏನು ತಿನ್ನಲು ಬಯಸುತ್ತೀಯಾ ಎಂದು ಕೇಳುತ್ತಾಳೆ. ರೋಟಿ ಸಬ್ಜಿ ಅಥವಾ ಅನ್ನ ಮತ್ತು ದಾಲ್ ತಿನ್ನಲು ಬಯಸುತ್ತೀಯಾ ಎಂದು ಕೇಳಿದಾಗ ಕೂಡಲೇ ಇಲ್ಲ ಎಂಬ ಪದವನ್ನು ಒತ್ತಿ ಹೇಳಿದ್ದಾನೆ.

ನಂತರ ತನ್ನ ತಾಯಿಗೆ ಆ ಬಾಲಕ ಇನ್ನೊಂದು ತುಂಡು ಕೇಕ್ ಬೇಕು ಎಂದು ಒತ್ತಾಯಿಸಿದ್ದಾನೆ. ಕಬೀರ್ ಸೂದ್ ಎಂಬ 23 ತಿಂಗಳ ಮಗುವಿಗೆ ಮೀಸಲಾಗಿರುವ ಇನ್ಸ್ಟಾಗ್ರಾಂ ಹ್ಯಾಂಡಲ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಸದ್ಯ ಭಾರಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...