alex Certify ನೋಕಿಯಾ ಹೊಸ ಫೋನ್ ಜೊತೆ ಸಿಗ್ತಿದೆ ಜಿಯೋದ ಈ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಕಿಯಾ ಹೊಸ ಫೋನ್ ಜೊತೆ ಸಿಗ್ತಿದೆ ಜಿಯೋದ ಈ ಆಫರ್

Nokia C30 budget phone with 6,000mAh battery launched: Price in India, Jio  offers, specs, and more

ನೋಕಿಯಾ ಅಭಿಮಾನಿಗಳಿಗೊಂದು ಖುಷಿ ಸುದ್ದಿಯಿದೆ. ನೋಕಿಯಾದ ಹೊಸ ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದ್ರ ಜೊತೆ ಕಂಪನಿ ಜಿಯೋ ಆಫರ್ ಕೂಡ ನೀಡ್ತಿದೆ. ನೋಕಿಯಾ ಸಿ30 ಜುಲೈನಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಈಗ ಭಾರತದಲ್ಲಿ ಬಿಡುಗಡೆಯಾಗಿದೆ.

ನೋಕಿಯಾ ಸಿ 30 ಎರಡು ರೂಪಾಂತರದಲ್ಲಿ ಲಭ್ಯವಿದೆ. 3ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 10,999 ರೂಪಾಯಿಗೆ ಲಭ್ಯವಿದೆ. 4ಜಿಬಿ ರ್ಯಾಮ್ ಹಾಗೂ 64 ಜಿಬಿ ಸ್ಟೋರೇಜ್ ಮೊಬೈಲ್ 11,999 ರೂಪಾಯಿಗೆ ಲಭ್ಯವಿದೆ. ಎರಡು ಬಣ್ಣಗಳಲ್ಲಿ ಮೊಬೈಲ್ ಲಭ್ಯವಿದೆ.

ನೋಕಿಯಾ ಸಿ30 ಸ್ಮಾರ್ಟ್ಫೋನ್ ಖರೀದಿ ಮಾಡಿದ್ರೆ ಸಾವಿರ ರೂಪಾಯಿ ರಿಯಾಯಿತಿ ಸಿಗಲಿದೆ. ಈ ರಿಯಾಯಿತಿ ಪಡೆಯಲು ಗ್ರಾಹಕರು ಮೈಜಿಯೋ ಅಪ್ಲಿಕೇಷನ್ ಮೂಲಕ ಖರೀದಿ ಮಾಡಬೇಕು. ಇದಲ್ಲದೆ ಈ ಮೊಬೈಲ್ ಖರೀದಿ ಮಾಡಿದ ಜಿಯೋ ಗ್ರಾಹಕರು 249 ರೂಪಾಯಿ ರಿಚಾರ್ಜ್ ಮಾಡಿದ್ರೆ, ಮಿಂತ್ರಾ ಸೇರಿದಂತೆ ಕೆಲ ಇ ಕಾಮರ್ಸ್ ಫ್ಲಾಟ್ಫಾರ್ಮ್ ನಲ್ಲಿ 4 ಸಾವಿರದವರೆಗೆ ಆಫರ್ ಸಿಗಲಿದೆ.

ನೋಕಿಯಾ ಸಿ30, 6.8 ಇಂಚಿನ ಹೆಚ್ಡಿ ಪ್ಲಸ್ ಡಿಸ್ಪೆಯೊಂದಿಗೆ ಬರಲಿದೆ. ಇದಕ್ಕೆ 6,000ಎಂಎಎಚ್ ಬ್ಯಾಟರಿ ನೀಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...