alex Certify ವೈಫೈ ಇಲ್ಲದೆ ಪರಸ್ಪರ ಮಾತನಾಡಲೆಂದೇ ಇರುವ ಕೆಫೆ ಇದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈಫೈ ಇಲ್ಲದೆ ಪರಸ್ಪರ ಮಾತನಾಡಲೆಂದೇ ಇರುವ ಕೆಫೆ ಇದು…!

“ನಮ್ಮಲ್ಲಿ ವೈಫೈ ಇಲ್ಲ, ನೀವು ಪರಸ್ಪರ ಮಾತನಾಡಿ. ಹಾಗೂ 1995ರ ಕಾಲದಲ್ಲಿರುವಂತೆ ಭಾವಿಸಿಕೊಳ್ಳಿ”
ಇದು ಯುಎಸ್‌ ಕೆಫೆಯೊಂದರಲ್ಲಿ ಎದ್ದು ಕಾಣುವ ಬರಹ. ವೈಫೈ ಇಂಟರ್‌ನೆಟ್‌ ಜಗತ್ತನ್ನಾಳುವ ಸಂದರ್ಭದಲ್ಲಿ ಇದರ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನೀವು 90ರ ದಶಕದವರಾಗಿದ್ದರೆ ಖಚಿತವಾಗಿಯೂ ತಂತ್ರಜ್ಞಾನದಿಂದ ಬದುಕಿನಲ್ಲಾದ ಬದಲಾವಣೆಯನ್ನು ಗಮನಿಸಿರುತ್ತೀರಿ.

ತಂತಿರಹಿತ ಲ್ಯಾಂಡ್‌ಲೈನ್, ಟಚ್ ಸ್ಕ್ರೀನ್‌ ಫೋನ್‌ಗಳ ತನಕದ ಸ್ಪಷ್ಟ ರೂಪಾಂತರವನ್ನು ನೋಡಿದ್ದೀರಿ.

ಪತ್ರಗಳನ್ನು ಬರೆಯುವುದರಿಂದ ಹಿಡಿದು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳ ಪರಿಚಯದವರೆಗೆ ಜಗತ್ತು ತೀವ್ರವಾಗಿ ಬದಲಾಗುತ್ತಿರುವುದಕ್ಕೆ ಸಾಕ್ಷಿಗಳಾಗಿದ್ದೀರಿ. ಆದರೆ ಇದರ ಮಧ್ಯೆ, ತಂತ್ರಜ್ಞಾನ ಬದುಕನ್ನು ಹಸನುಗೊಳಿಸುವ ಮೊದಲು ಜೀವನ ಹೇಗಿತ್ತು ಎಂಬುದು ಬಹುತೇಕರಿಗೆ ಮರೆತೇ ಹೋಗಿದೆ.

ಅದಕ್ಕಾಗಿಯೇ, ಯುಎಸ್‌ನಲ್ಲಿರುವ ಈ ಕೆಫೆಯು ನಿಮ್ಮ 90ರ ದಶಕದ ಅನುಭವವನ್ನು ನಾಸ್ಟಾಲ್ಜಿಯಾ ಸ್ಪರ್ಶದಿಂದ ಪುನರುಜ್ಜೀವನಗೊಳಿಸುತ್ತದೆ. ಇಂದ್ರನಿಲ್ ಘೋಷ್ ಅವರು ಟ್ವಿಟರ್‌ನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ಪೋಸ್ಟ್ ಯುಎಸ್‌ನಲ್ಲಿರುವ ಕೆಫೆಯ ಒಳಾಂಗಣವನ್ನು ತೋರಿಸುತ್ತದೆ.

“ನಮ್ಮಲ್ಲಿ ವೈಫೈ ಇಲ್ಲ, ಪರಸ್ಪರ ಮಾತನಾಡಿ ಮತ್ತು ಅದು 1995ರ ಕಾಲದಲ್ಲಿದ್ದೀರಿ ಎಂಬಂತೆ ನಟಿಸಿ” ಎಂದು ಗೋಡೆಯ ಮೇಲೆ ಬರೆದ ಉಲ್ಲೇಖವನ್ನು ಓದಿ. ಓಹ್‌… ಆ ಸುವರ್ಣ ದಿನಗಳು!

ಪ್ರವಾಹ ಪೀಡಿತ ಅಸ್ಸಾಂನಲ್ಲಿ ಐಎಎಸ್‌ ಅಧಿಕಾರಿಗೆ ದಣಿವರಿಯದ ಕೆಲಸ; ನೆಟ್ಟಿಗರ ಶ್ಲಾಘನೆ

ಚಿತ್ರ ಮತ್ತು ಪರಿಕಲ್ಪನೆಯು ಅಂತರ್ಜಾಲದಲ್ಲಿ ಕೆಲಕಾಲದಿಂದ ಓಡಾಡುತ್ತಿದ್ದರೂ, ಈ ಪೋಸ್ಟ್ ಬಹಳಷ್ಟು ಕಾಮೆಂಟ್‌ಗಳನ್ನು ಗಳಿಸಿದೆ ಮತ್ತು ನೆಟಿಜನ್‌ಗಳಿಂದ 3 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಪಡೆದಿದೆ.

90 ರ ದಶಕದಲ್ಲಿ ಜನರು ತಮ್ಮ ನೆನಪುಗಳನ್ನು ಮೆಲುಕು ಹಾಕುವುದನ್ನು ನಿಲ್ಲಿಸಲಾಗುತ್ತಿಲ್ಲ. ಇದು ಬದುಕಲು ಉತ್ತಮ ಸಮಯ ಎಂದು ಹಲವರು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...