alex Certify ‘ಪಿಯುಸಿ’ ಪ್ರಮಾಣ ಪತ್ರ ಇಲ್ಲದಿದ್ದವರಿಗೆ ಈ ಊರಿನಲ್ಲಿ ಸಿಗುವುದಿಲ್ಲ ಪೆಟ್ರೋಲ್ – ಡೀಸೆಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪಿಯುಸಿ’ ಪ್ರಮಾಣ ಪತ್ರ ಇಲ್ಲದಿದ್ದವರಿಗೆ ಈ ಊರಿನಲ್ಲಿ ಸಿಗುವುದಿಲ್ಲ ಪೆಟ್ರೋಲ್ – ಡೀಸೆಲ್….!

ಪಿಯುಸಿ ಪ್ರಮಾಣ ಪತ್ರ ಇಲ್ಲದಿದ್ದವರಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಕ್ಟೋಬರ್ 25ರಿಂದ ಪೆಟ್ರೋಲ್ – ಡೀಸೆಲ್ ನೀಡದೆ ಇರಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ.

ಪಿಯುಸಿ ಪ್ರಮಾಣ ಪತ್ರ ಅಂದಾಕ್ಷಣ ಅದು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ್ದು ಎಂದು ನೀವು ಭಾವಿಸಬೇಡಿ. ಪಿಯುಸಿ ಅಂದರೆ ‘ಪಲ್ಯೂಷನ್ ಅಂಡರ್ ಕಂಟ್ರೋಲ್’ ಪ್ರಮಾಣ ಪತ್ರ. ಈ ಪ್ರಮಾಣ ಪತ್ರ ಇದೆ ಎಂದರೆ ವಾಹನದ ಮಾಲಿನ್ಯ ನಿಯಂತ್ರಣದಲ್ಲಿದೆ ಎಂಬರ್ಥ.

ನಹದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಸರ್ಕಾರ, ಪಿಯುಸಿ ಪ್ರಮಾಣ ಪತ್ರ ಅರ್ಥಾತ್ ‘ಪಲ್ಯೂಶನ್ ಅಂಡರ್ ಕಂಟ್ರೋಲ್’ ಪ್ರಮಾಣ ಪತ್ರ ಹೊಂದಿರುವವರಿಗೆ ಮಾತ್ರ ಪೆಟ್ರೋಲ್ ಬಂಕ್ ಗಳಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ನೀಡಲು ತೀರ್ಮಾನಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...