alex Certify ಜಿಮ್‌ ಗಳಲ್ಲಿ ಫಾಸ್ಟ್‌ ಮ್ಯೂಸಿಕ್‌ ಗೆ ಬಿತ್ತು ಬ್ರೇಕ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಮ್‌ ಗಳಲ್ಲಿ ಫಾಸ್ಟ್‌ ಮ್ಯೂಸಿಕ್‌ ಗೆ ಬಿತ್ತು ಬ್ರೇಕ್…..!

No More 'Gangnam Style': South Korea's Covid Rules Want Slower Workout Music in Gyms

ಕೋವಿಡ್ ಲಾಕ್‌ಡೌನ್‌ ಸಡಿಲಿಕೆ ಬಳಿಕ ನಿಧಾನವಾಗಿ ಜಿಮ್‌ಗಳತ್ತ ತೆರಳುತ್ತಿರುವ ಫಿಟ್ನೆಸ್ ಉತ್ಸಾಹಿಗಳಿಗೆ ದಕ್ಷಿಣ ಕೊರಿಯಾ ಆಡಳಿತ ವಿಶಿಷ್ಟವಾದ ನಿರ್ಬಂಧವೊಂದನ್ನು ಹೇರಿದೆ.

ಸಾಮಾಜಿಕ ಅಂತರ, ಮಾಸ್ಕ್‌, ಸ್ಯಾನಿಟೈಸರ್‌ಗಳಲ್ಲದೇ ಹೊಸದೊಂದು ನಿಬಂಧನೆ ತಂದಿರುವ ದಕ್ಷಿಣ ಕೊರಿಯಾ, ಜಿಮ್‌ಗಳಲ್ಲಿ 120 ಬಡಿತ/ನಿಮಿಷಕ್ಕಿಂತ ಹೆಚ್ಚಿನ ಸಂಗೀತವನ್ನು ಹಾಕುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಏರೋಬಿಕ್ಸ್, ಸ್ಪಿನ್ನಿಂಗ್‌ನಂಥ ತ್ವರಿತ ವ್ಯಾಯಾಮಗಳನ್ನು ಮಾಡುವಾಗ ಹೀಗೆ ವೇಗದ ಮ್ಯೂಸಿಕ್ ಹಾಕಲಾಗುತ್ತದೆ.

ಜೋರಾಗಿ ಉಸಿರಾಡುವುದು ಹಾಗೂ ಅಕ್ಕಪಕ್ಕದಲ್ಲಿರುವ ಜನರ ಮೇಲೆ ಬೆವರ ಹನಿಗಳು ಹಾರುವಂಥ ಪ್ರಸಂಗಗಳಿಂದ ಕೋವಿಡ್ ಸೋಂಕು ಹಬ್ಬುವ ಸಾಧ್ಯತೆ ಇರುವ ಕಾರಣ ಹೀಗೊಂದು ವಿನೂತನ ನಿರ್ಬಂಧವೊಂದನ್ನು ದಕ್ಷಿಣ ಕೊರಿಯಾದಲ್ಲಿ ಪರಿಚಯಿಸಲಾಗಿದೆ.

ಆದರೆ ಈ ನಿಯಮವನ್ನು ಕಟುವಾಗಿ ವಿರೋಧಿಸಿರುವ ದ.ಕೊರಿಯಾದ ವಿರೋಧ ಪಕ್ಷಗಳು ಇದೊಂದು ಅವಿವೇಕದ ಆದೇಶ ಎಂದಿದ್ದಾರೆ. ಇದೊಂದು ಅವಾಸ್ತವಿಕ ಆದೇಶ ಎಂದು ಜಿಮ್ ಮಾಲೀಕರ ಬಳಗ ಆರೋಪಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...