alex Certify ಬಾತ್ ರೂಮ್ ಗೆ ಹೋಗಿದ್ದ ಪತಿ; ಮನೆಗೆ ಬೀಗ ಹಾಕಿ ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾತ್ ರೂಮ್ ಗೆ ಹೋಗಿದ್ದ ಪತಿ; ಮನೆಗೆ ಬೀಗ ಹಾಕಿ ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ…!

ಬೆಂಗಳೂರು: ಪತಿ ಸ್ನಾನಕ್ಕೆಂದು ಬಾತ್ ರೂಮಿಗೆ ಹೋಗಿದ್ದ ವೇಳೆ ನವವಿವಾಹಿತೆ ಮನೆಗೆ ಬೀಗ ಹಾಕಿ ಪ್ರಿಯತಮನೊಂದಿಗೆ ಪರಾರಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ರಮೇಶ್ ಎಂಬಾತ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಬೆಂಗಳೂರಿನ ಆರ್.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿಯನ್ನು ಪ್ರೀತಿಸಿ ಎರಡು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ರಮೇಶ್ ಗೆ ಪತ್ನಿಯೇ ಮೋಸ ಮಾಡಿದ್ದಾಳೆ ಎನ್ನಲಾಗಿದೆ.

ಎರಡು ದಿನಗಳ ಹಿಂದೆ ರಮೇಶ್ ಸ್ನಾನಕ್ಕೆಂದು ಬಾತ್ ರೂಮಿಗೆ ಹೋಗಿದ್ದನಂತೆ ಈ ವೇಳೆ ಪತ್ನಿ ಮನೆಗೆ ಲಾಕ್ ಮಾಡಿಕೊಂಡು ಹೋಗಿದ್ದು, ಪ್ರಿಯತಮನ ಬೈಕ್ ಏರಿ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ ರಮೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...