alex Certify ಪ್ರವಾಸಕ್ಕೆ ಹೋದ ಪತಿ ಮೇಲೆ ಕೋಪಗೊಂಡ ಪತ್ನಿಗೆ ಮರುದಿನ ಸಿಕ್ಕಿದ್ದು ಶಾಕಿಂಗ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಕ್ಕೆ ಹೋದ ಪತಿ ಮೇಲೆ ಕೋಪಗೊಂಡ ಪತ್ನಿಗೆ ಮರುದಿನ ಸಿಕ್ಕಿದ್ದು ಶಾಕಿಂಗ್ ನ್ಯೂಸ್

Normal For Husband to Vacation Without Me? - FatherResource

ಪತಿ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೊರಟಾಗ ಪತ್ನಿಗೆ ಬೇಸರವಾಗುವುದು ಸಾಮಾನ್ಯ. ಕೆಲ ಪತ್ನಿಯರು ಇದೇ ವಿಷ್ಯಕ್ಕೆ ಜಗಳ ಮಾಡ್ತಾರೆ. ನ್ಯೂಜಿಲೆಂಡ್‌ನ ನಿವಾಸಿ ಬೋನಿ ಕಾಲ್ಡ್ ವೆಲ್ ಕೂಡ ಪತಿಯ ಪ್ರವಾಸದ ವಿಷ್ಯ ಕೇಳಿ ಬೇಸರಗೊಂಡಿದ್ದಳಂತೆ. ಆದ್ರೆ ಮುಂದೆ ಇಂಥ ನೋವಿನ ಘಟನೆ ನಡೆಯುತ್ತದೆ ಎಂಬುದನ್ನು ಆಕೆ ಊಹಿಸಿರಲಿಲ್ಲವಂತೆ.

ಟಿಕ್ ಟಾಕ್ ನಲ್ಲಿ ದುಃಖದ ವಿಷ್ಯವನ್ನು ಭಿನ್ನವಾಗಿ ಹಂಚಿಕೊಂಡಿರುವ ಮಹಿಳೆ ತಾನು ಸ್ವಲ್ಪ ತಮಾಷೆ ಸ್ವಭಾವದವಳು. ಹಾಗಾಗಿ ಎಲ್ಲವನ್ನೂ ಮರೆಯುವ ಪ್ರಯತ್ನ ನಡೆಸಿದ್ದೇನೆ ಎಂದಿದ್ದಾಳೆ. 8 ತಿಂಗಳ ಹಿಂದೆ ಆಕೆ ಪತಿ 200 ಕಿಲೋಮೀಟರ್ ದೂರದಲ್ಲಿರುವ ಊರಿಗೆ ಸ್ನೇಹಿತರ ಜೊತೆ ಹೋಗಿದ್ದನಂತೆ. ರಾತ್ರಿ 12 ಗಂಟೆಯವರೆಗೆ ಮಾತನಾಡಿದ್ದರಂತೆ. ನಂತ್ರ ಪತ್ನಿ, ಪತಿಗೆ ಮೆಸ್ಸೇಜ್ ಮಾಡಿದ್ದಳಂತೆ. ಆದ್ರೆ ಅದಕ್ಕೆ ಪತಿ ಬೆಳಿಗ್ಗೆಯಾದ್ರೂ ಉತ್ತರ ನೀಡಿರಲಿಲ್ಲವಂತೆ. ಆತನ ಸ್ನೇಹಿತರ ಫೋಟೋಗಳನ್ನು ಆಕೆ ನೋಡಿದ್ದಾಳೆ. ಅವರೆಲ್ಲರೂ ಫೋಟೋದಲ್ಲಿದ್ದರು. ಆದ್ರೆ ಪತಿ ಇರಲಿಲ್ಲ. ಆತ ಕುಡಿದು ಮಲಗಿರಬಹುದೆಂದು ಭಾವಿಸಿದ್ದಳಂತೆ. ಆದ್ರೆ ಚೆಕ್ ಔಟ್ ಸಮಯ ಬಂದ್ರೂ ಪತಿ ಕರೆ ಮಾಡಿಲ್ಲವಂತೆ.

ನಂತ್ರ ಪತಿ ಸಹೋದರ ಮನೆಗೆ ಕರೆದು ವಿಷ್ಯ ತಿಳಿಸಿದ್ದನಂತೆ. ಆಕೆ ಪತಿ ಕುಡಿದ ಮತ್ತಿನಲ್ಲಿ ಹಳ್ಳದ ಬಳಿ ಮೂತ್ರ ವಿಸರ್ಜನೆಗೆ ಹೋಗಿದ್ದಾನೆ. ಅಲ್ಲಿ ಕಾಲುಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂಬ ಸಂಗತಿ ಗೊತ್ತಾಗಿದೆಯಂತೆ. ಆದ್ರೆ ಪತಿ ಸಾವಿನ ವಿಷ್ಯವನ್ನು ಟಿಕ್ ಟಾಕ್ ನಲ್ಲಿ ಭಿನ್ನವಾಗಿ ಹಂಚಿಕೊಂಡ ಮಹಿಳೆಯನ್ನು ಬಳಕೆದಾರರು ಮೆಚ್ಚಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...