alex Certify ವಿಮಾನದಲ್ಲಿ ಪ್ರಯಾಣಿಸುವಾಗ ಈ ಹೆಸರಿನಿಂದ ಎಂದೂ ಕರೆಯಬೇಡಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಪ್ರಯಾಣಿಸುವಾಗ ಈ ಹೆಸರಿನಿಂದ ಎಂದೂ ಕರೆಯಬೇಡಿ…..!

ಹೆಸರಿನಲ್ಲಿ ಏನಿದೆ ಎಂದು ಕೇಳುವವರೇ ಹೆಚ್ಚು. ಆದರೆ ಹೆಸರು ಇಲ್ಲದಿದ್ದರೆ ಈ ಜಗತ್ತು ಹೇಗಿರುತ್ತಿತ್ತು ಎಂದು ಊಹಿಸುವುದೂ ಕಷ್ಟ ಅಲ್ಲವೆ ? ಆದರೆ ಹೆಸರಿನಲ್ಲಿಯೇ ಎಲ್ಲ ಇದೆ ಎನ್ನುವ ತಮಾಷೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಈ ವೈರಲ್​ ವಿಡಿಯೋದಲ್ಲಿ ಜಾಕ್​ ಎಂಬ ಸ್ನೇಹಿತ ಬಂದಾಗ ಆತನ ಸ್ನೇಹಿತ ಅವನನ್ನು ಹಾಯ್​ ಜಾಕ್​ ಎಂದು ಕರೆದಾಗ ವಿಮಾನದಲ್ಲಿ ಆಗುವ ಕೋಲಾಹಲವನ್ನು ತಮಾಷೆಯ ರೂಪದಲ್ಲಿ ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಅಷ್ಟಕ್ಕೂ ವಿಮಾನ ಅಪಹರಣವಾಗುವುದು ಆಗಾಗ್ಗೇ ನಡೆದೇ ಇರುತ್ತದೆ. ಇದರಿಂದ ಹೈಜಾಕ್​ ಎಂಬ ಶಬ್ದಕ್ಕೆ ವಿಮಾನದಲ್ಲಿ ಹಾರಾಟ ನಡೆಸುವವರು ಸದಾ ಹೆದರುತ್ತಲೇ ಇರುತ್ತದೆ. ವಿಮಾನ ಅಪಹರಣದ ಘಟನೆ ಮೊದಲ ಬಾರಿಗೆ ನಡೆದಿರುವುದು ಫೆಬ್ರವರಿ 21, 1931 ರಂದು ಪೆರುವಿನ ಅರೆಕ್ವಿಪಾದಲ್ಲಿ ಎನ್ನಲಾಗಿದೆ.

ಕೇವಲ ವಾರದ ಹಿಂದೆ ಅದರ 92 ನೇ ವಾರ್ಷಿಕೋತ್ಸವವಾಗಿದ್ದು, ಈ ಸಂದರ್ಭದಲ್ಲಿ ನಡೆದ ಘಟನೆಯೊಂದು ತಮಾಷೆಯ ರೂಪದಲ್ಲಿ ಈಗ ವೈರಲ್​ ಆಗಿದೆ. ಪ್ರಯಾಣಿಕನೊಬ್ಬನ ಸ್ನೇಹಿತ ಜಾಕ್​ ಎನ್ನುವವನ್ನು ಏಕಾಏಕಿ ನೋಡಿದಾಗ ಆತನ ಸ್ನೇಹಿತ ಖುಷಿಯನ್ನು ತಡೆದುಕೊಳ್ಳಲು ಆಗದೇ ಹಾಯ್​ ಜಾಕ್​ ಎಂದು ಜೋರಾಗಿ ಕೂಗಿದಾಗ, ವಿಮಾನ ಹೈಜಾಕ್​ ಆಯಿತು ಎಂದು ಎಲ್ಲರೂ ಬೆಚ್ಚಿಬೀಳುವ ವಿಡಿಯೋ ಇದಾಗಿದ್ದು, ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ.

— ViralPosts (@ViralPosts5) February 25, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...