alex Certify ತಂದೆ ಡೈರಿಯಲ್ಲಿದ್ದ ಮುಗ್ಧ ನೋಟ್​ ಹಂಚಿಕೊಂಡ ಪುತ್ರ..! ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಡೈರಿಯಲ್ಲಿದ್ದ ಮುಗ್ಧ ನೋಟ್​ ಹಂಚಿಕೊಂಡ ಪುತ್ರ..! ನೆಟ್ಟಿಗರು ಫಿದಾ

ಡಿಜಿಟಲ್​ ಯುಗದಲ್ಲಿ ಎಲ್ಲಾ ಕೆಲಸವೂ ಅಂಗೈನಲ್ಲೇ ಆಗುತ್ತದೆ. ಆಹಾರವಿರಲಿ, ಬಟ್ಟೆ ಇರಲಿ, ಎಲೆಕ್ಟ್ರಾನಿಕ್​ ಸಾಮಗ್ರಿ ಇರಲಿ ಹೀಗೆ ನೀವು ಏನೇ ಖರೀದಿ ಮಾಡಬೇಕು ಅಂದ್ರೂನು ಕ್ಷಣ ಮಾತ್ರದಲ್ಲಿ ಆಗುತ್ತದೆ.

ಅಷ್ಟೇ ಏಕೆ..? ನೀವು ಎಲ್ಲಿಗಾದರೂ ಹೋಗಬೇಕೆಂದರೂ ಮನೆ ಬಾಗಿಲಿಗೆ ವಾಹನವು ಬಂದು ನಿಲ್ಲುತ್ತದೆ.

ಟ್ವಿಟರ್​ ಬಳಕೆದಾರ ರಾಹುಲ್​ ಗುಪ್ತಾ ಎಂಬವರು ತಮ್ಮ ತಂದೆಯ ಡೈರಿಯಿಂದ ಒಂದು ಪುಟದ ಫೋಟೋವನ್ನು ಶೇರ್​ ಮಾಡಿದ್ದಾರೆ. ಇದರಲ್ಲಿ ತಂದೆ ಊಬರ್​​ನಲ್ಲಿ ಕ್ಯಾಬ್​ ಬುಕ್​ ಮಾಡುವುದು ಹೇಗೆ ಅನ್ನೋದನ್ನು ಹಂತ ಹಂತವಾಗಿ ಬರೆದುಕೊಂಡಿದ್ದಾರೆ. ಇದರಲ್ಲಿ ಪ್ರತಿಯೊಂದು ಸಣ್ಣ ಸಣ್ಣ ಹಂತಗಳಿಂದ ಹಿಡಿದು ನಿಮ್ಮ ರೈಡ್​ ಬುಕ್​ ಆಗಿದೆ ಎಂಬುವರೆಗೂ ಬರೆಯಲಾಗಿದೆ.

ಈ ಫೋಟೋವನ್ನು ಶೇರ್​ ಮಾಡಿರುವ ರಾಹುಲ್​, ಊಬರ್​ನಲ್ಲಿ ಕ್ಯಾಬ್​ ಬುಕ್​ ಮಾಡುವುದು ಹೇಗೆ ಎಂದು ನನ್ನ ತಂದೆ ಬರೆದಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಟ್ವೀಟ್​ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ತಂದೆಯ ಮುಗ್ಧತೆ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

— Rahul Gupta ㊗️ (@rahulrmv) September 14, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...