alex Certify ನೆಟ್​ಫ್ಲಿಕ್ಸ್​ನಿಂದ ಬಳಕೆದಾರರಿಗೆ ವಿಡಿಯೋಗೇಮ್​ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್​ಫ್ಲಿಕ್ಸ್​ನಿಂದ ಬಳಕೆದಾರರಿಗೆ ವಿಡಿಯೋಗೇಮ್​ ಸೌಲಭ್ಯ

ಪ್ರಸಿದ್ಧ ಒಟಿಟಿ ವೇದಿಕೆ ನೆಟ್​ಫ್ಲಿಕ್ಸ್​ ತನ್ನ ಬಳಕೆದಾರರಿಗೆ ವಿಡಿಯೋ ಗೇಮ್​ ಸೌಲಭ್ಯವನ್ನೂ ನೀಡಲಿದೆ. ಇದಕ್ಕಾಗಿ ನೆಟ್​ಫ್ಲಿಕ್ಸ್​ ಕಂಪನಿಯು ಫೇಸ್​ಬುಕ್​ & ಎಲೆಕ್ಟ್ರಾನಿಕ್ಸ್​ ಮಾಜಿ ಆರ್ಟ್ಸ್​ ಎಕ್ಸಿಕ್ಯೂಟಿವ್​​ ಮೈಕ್​ ವೆರ್ಡುರನ್ನ ವಿಡಿಯೋ ಗೇಮ್​ ಅಭಿವೃದ್ಧಿಯ ನೂತನ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ವೆರ್ಡು ಈ ಹಿಂದೆ ಫೇಸ್​ಬುಕ್​​ ರಿಯಾಲಿಟಿ ಲ್ಯಾಬ್ಸ್​​ನ ಉಪಾಧ್ಯಕ್ಷರಾಗಿದ್ದರು. ವೆರ್ಡು ನೆಟ್​ಫ್ಲಿಕ್ಸ್​ ಮುಖ್ಯ ಕಾರ್ಯಾಚರಣಾ ಅಧಿಕಾರಿ ಗ್ರೆಗ್​ ಪೀಟರ್ಸ್​ಗೆ ವರದಿ ಮಾಡಿಕೊಳ್ಳುತ್ತಿದ್ದಾರೆ.

ಮಧ್ಯಪ್ರದೇಶ: ಬಾವಿಗೆ ಬಿದ್ದು ಮೃತಪಟ್ಟವರ ಸಂಖ್ಯೆ 11 ಕ್ಕೆ ಏರಿಕೆ, ಪರಿಹಾರ ಘೋಷಿಸಿದ ಮೋದಿ

ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಒಟಿಟಿ ವೇದಿಕೆಯಲ್ಲಿ ಮುಂಚೂಣಿ ಸ್ಥಾನದಲ್ಲಿರುವ ನೆಟ್​ಫ್ಲಿಕ್ಸ್ 2019ರಲ್ಲಿಯೇ ಗೇಮಿಂಗ್​ ಮಾರುಕಟ್ಟೆಗೆ ಕಾಲಿಡುವ ಬಗ್ಗೆ ಮುನ್ಸೂಚನೆ ನೀಡಿತ್ತು. ಪ್ರಾರಂಭದ ದಿನಗಳಲ್ಲಿ ನೆಟ್​ಫ್ಲಿಕ್ಸ್​ ಹೆಚ್ಚುವರಿ ಶುಲ್ಕವಿಲ್ಲದೇ ಗೇಮಿಂಗ್​ ಸೇವೆ ನೀಡುತ್ತಿದೆ.

ಇದು ಮಾತ್ರವಲ್ಲದೇ ಮಕ್ಕಳ ಗೇಮಿಂಗ್​ ಬಳಕೆ ಬಗ್ಗೆ ಪೋಷಕರು ಕಣ್ಣಿಡಲು ಕಿಡ್ಸ್​ ರಿಕ್ಯಾಪ್​ ಮೇಲ್​ ಎಂಬ ಸೌಲಭ್ಯವನ್ನ ನೀಡಿದೆ. ಈ ಸೌಲಭ್ಯದ ಮೂಲಕ ಪೋಷಕರು ಮಕ್ಕಳ ಮೇಲೆ ನಿಗಾ ಇಡಬಹುದಾಗಿದೆ. ನೆಟ್​ಫ್ಲಿಕ್ಸ್​​​ ಪ್ರೊಫೈಲ್​​ನಲ್ಲಿ ಮಕ್ಕಳ ಖಾತೆ ಜೋಡಿಸಿಕೊಂಡ ಬಳಿಕ ಪೋಷಕರು ಮಕ್ಕಳ ಚಟುವಟಿಕೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...