alex Certify ಗುಡ್​ ನ್ಯೂಸ್​: ನೆಟ್​ಫ್ಲಿಕ್ಸ್ ಮಾಸಿಕ​ ಚಂದಾದಾರಿಕೆ ಮೊತ್ತದಲ್ಲಿ ಭಾರೀ ಇಳಿಕೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್​ ನ್ಯೂಸ್​: ನೆಟ್​ಫ್ಲಿಕ್ಸ್ ಮಾಸಿಕ​ ಚಂದಾದಾರಿಕೆ ಮೊತ್ತದಲ್ಲಿ ಭಾರೀ ಇಳಿಕೆ…..!

ಅಮೆಜಾನ್​ ಪ್ರೈಮ್​, ಡಿಸ್ನೆ ಪ್ಲಸ್​ ಹಾಟ್​ಸ್ಟಾರ್​ ಸೇರಿದಂತೆ ವಿವಿಧ ವಿಡಿಯೋ ಆನ್​ ಡಿಮ್ಯಾಂಡ್ ಪ್ಲೇಯರ್​ಗಳ ತೀವ್ರ ಪೈಪೋಟಿ ನಡುವೆಯೇ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ನೆಟ್​ಫ್ಲಿಕ್ಸ್​ ತನ್ನ ಚಂದಾದಾರಿಕೆ ಯೋಜನೆಗಳ ಬೆಲೆಯನ್ನು ಇಳಿಕೆ ಮಾಡಿದೆ.

ಕಂಪನಿಯು ಪ್ರತಿ ತಿಂಗಳಿಗೆ 199 ರೂಪಾಯಿ ಇದ್ದ ಮೊಬೈಲ್​ ಪ್ಲಾನ್​ನ್ನು 149 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ. ಈ ಹಿಂದೆ 499 ರೂಪಾಯಿ ಇದ್ದ ಬೇಸಿಕ್​ ಪ್ಲಾನ್​​ ಇನ್ಮುಂದೆ 199 ರೂಪಾಯಿಗೆ ಲಭ್ಯವಿರಲಿದೆ. 649 ರೂಪಾಯಿ ಇದ್ದ ಸ್ಟಾಂಡರ್ಡ್​ ಪ್ಲಾನ್​ 499 ರೂಪಾಯಿಗೆ ಇಳಿಕೆ ಮಾಡಲಾಗಿದೆ. ತಿಂಗಳಿಗೆ 799 ರೂಪಾಯಿ ಇದ್ದ ಪ್ರೀಮಿಯಂ ಪ್ಲಾನ್​ ಇದೀಗ 649 ರೂಪಾಯಿಗೆ ಸಿಗಲಿದೆ.

ಅಮೆಜಾನ್​ ಪ್ರೈಮ್​ 1 ತಿಂಗಳ ಚಂದಾದಾರಿಕೆ 129 ರೂಪಾಯಿಗಳಿಗೆ ಲಭ್ಯವಿದ್ದರೆ ಡಿಸ್ನೆ ಪ್ಲಸ್​ ಹಾಟ್​ಸ್ಟಾರ್​ ಪ್ರತಿ ವರ್ಷಕ್ಕೆ ಪ್ರೀಮಿಯಂ ಸರ್ವೀಸ್​ 1499 ರೂಪಾಯಿ ಹಾಗೂ ಮೊಬೈಲ್​ಗೆ 499 ರೂಪಾಯಿಗಳಿಗೆ ಲಭ್ಯವಿದೆ.

ಈ ಪರಿಷ್ಕೃತ ಪ್ಲಾನ್​ ದರಗಳಿಗೆ ನೆಟ್​ಫ್ಲಿಕ್ಸ್​ ಕಂಪನಿಯು ಹ್ಯಾಪಿ ನ್ಯೂ ಪ್ರೈಸಸ್​ ಎಂದು ಹೆಸರು ನೀಡಿದೆ. ಈ ಪರಿಷ್ಕೃತ ದರವು ಇಂದಿನಿಂದ ಲಭ್ಯವಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ನೆಟ್​ಫ್ಲಿಕ್ಸ್​ ಇಂಡಿಯಾ ಕಟೆಂಟ್​ ಉಪಾಧ್ಯಕ್ಷರಾದ ಮೋನಿಕಾ ಶೆರ್ಗಿಲ್​ ದರ ಕಡಿತವು ಮುಂಬರುವ ಹೊಸ ವಿಷಯಗಳೊಂದಿಗೆ ಸಂಬಂಧ ಹೊಂದಿದೆ. ಕಳೆದ ಮೂರು ವಾರಗಳಿಂದ ನಾವು ದೊಡ್ಡ ದೊಡ್ಡ ಟೈಟಲ್​ಗಳನ್ನು ಹೊರತರುತ್ತಿದ್ದೇವೆ. ಈ ವಿಚಾರವನ್ನು ಹೊಸ ಪ್ರೇಕ್ಷಕರಿಗೆ ನೀಡಲು ಸಿದ್ಧರಾಗಿದ್ದೇವೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...