alex Certify ಇಲ್ಲಿದೆ ನೋಡಿ ಅಪರೂಪದ ʼನೀಲ ಕುರಿಂಜಿʼ ಹೂವಿನ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನೋಡಿ ಅಪರೂಪದ ʼನೀಲ ಕುರಿಂಜಿʼ ಹೂವಿನ ವಿಶೇಷತೆ

ಈ ಹೂವಿನ ಹೆಸರು ನೀಲ ಕುರಿಂಜಿ. ಕೊಡಗು, ಚಿಕ್ಕಮಗಳೂರಿನ ಬಾಬಾ ಬುಡನ್‌ ಗಿರಿ, ಮುಳ್ಳಯ್ಯನ ಗಿರಿ,  ಕೇರಳದ ನೀಲಗಿರಿ ಬೆಟ್ಟಗಳಲ್ಲಿ ಈ ಹೂವು 5 ರಿಂದ 12 ವರ್ಷಗಳಿಗೊಮ್ಮೆ ಅರಳುತ್ತದೆ. ಇದನ್ನು ನೋಡಲು ಪ್ರಕೃತಿಪ್ರಿಯರು ಪಶ್ಚಿಮ ಘಟ್ಟಗಳ ಆಯ್ದ ಧಾಮಗಳಿಗೆ ಹೋಗುತ್ತಾರೆ.

ನೀಲಿ ಬಣ್ಣದ ನೀಲಕುರಿಂಜಿ ಹೂವು ನೋಡಲು ಸುಂದರವಾಗಿರುತ್ತದೆ. ನೀಲಕುರಿಂಜಿ ಹೂವು ಆಗಸ್ಟ್ ಹಾಗೂ ಸೆಪ್ಟೆಂಬರ್ ಮಧ್ಯೆ ಅರಳುತ್ತದೆ. ಸಂಪೂರ್ಣ ಬೆಟ್ಟವನ್ನು ನೀಲಿ ಬಣ್ಣದಿಂದ ಆವರಿಸುವ ಈ ಹೂವುಗಳು ಇದೀಗ ಚಿಕ್ಕಮಗಳೂರಿನ ಬೆಟ್ಟಗಳಲ್ಲಿ ಅರಳುತ್ತಿದ್ದು, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.

ಪ್ರೇಮದ ಸಂಕೇತ ಎಂದು ಕರೆಯಲಾಗುವ ಈ ಹೂವಿನ 250ಕ್ಕೂ ಹೆಚ್ಚು ವಿಧಗಳು ವರ್ಷದ ಬೇರೆ ಬೇರೆ ಅವಧಿಯಲ್ಲಿ ಅರಳುತ್ತವೆ. ಕೆಲವೊಂದು ತಳಿಗಳು 14 ವರ್ಷಗಳಿಗೊಮ್ಮೆ ಅರಳುತ್ತವೆ. ಭಾರತದಲ್ಲಿ ನೀಲಕುರಿಂಜಿಯ 46 ವಿಧಗಳು ಕಂಡುಬರುತ್ತವೆ. ಈ ಸಸಿಯಲ್ಲಿ ಔಷಧೀಯ ಗುಣಗಳೂ ಇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...