alex Certify ಭೂಮಿಯಿಂದ 390 ಜ್ಯೋತಿರ್ವರ್ಷ ದೂರವಿರುವ ಗ್ಯಾಲಾಕ್ಸಿಯ ಚಿತ್ರ ಹಂಚಿಕೊಂಡ ʼನಾಸಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಮಿಯಿಂದ 390 ಜ್ಯೋತಿರ್ವರ್ಷ ದೂರವಿರುವ ಗ್ಯಾಲಾಕ್ಸಿಯ ಚಿತ್ರ ಹಂಚಿಕೊಂಡ ʼನಾಸಾʼ

ಅಮೆರಿಕದ ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ಭೂಮಿಯಿಂದ 390 ಜ್ಯೋತಿರ್ವರ್ಷ ದೂರವಿರುವ Z 229-15 ಎಂಬ ವಸ್ತುವೊಂದನ್ನು ಪತ್ತೆ ಮಾಡಿದೆ. ಈ ವಸ್ತುವನ್ನು ಲೈರಾ ಹೆಸರಿನ ನಕ್ಷತ್ರಪುಂಜದಲ್ಲಿ ಕಾಣಬಹುದಾಗಿದೆ.

“ಆಕಾಶ ವಸ್ತುಗಳ ಮೇಲೆ ಆಸಕ್ತಿ ಇರುವ ಮಂದಿಗೆ Z 229-15 ಬಹಳ ಆಸಕ್ತಿದಾಯಕ ವಿಚಾರವಾಗಿದೆ. ಕೆಲವೊಮ್ಮೆ ಸಕ್ರಿಯ ಕ್ಷೀರಪಥದ ಕೇಂದ್ರವಾಗಿ, ಕೆಲವೊಮ್ಮೆ ಕ್ವಾಸರ್‌ ಆಗಿ ಮತ್ತು ಕೆಲವೊಮ್ಮೆ ಸೇಫರ್ಟ್ ಗ್ಯಾಲಾಕ್ಷಿ ಆಗಿ Z 229-15 ಅಧ್ಯಯನ ನಡೆಸಲು ಬಹಳಷ್ಟು ಆಸಕ್ತಿ ಮೂಡಿಸುತ್ತದೆ,” ಎಂದು ನಾಸಾ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿದು ಬಂದಿದೆ.

ಸುರುಳಿಯಾಕಾರಾ ಗ್ಯಾಲಾಕ್ಷಿಯನ್ನು ಈ ಚಿತ್ರ ತೋರುತ್ತಿದೆ. ನಾಸಾ ಪ್ರಕಾರ ಈ ಗ್ಯಾಲಾಕ್ಸಿಗೆ ಎರಡು ನೇರ ಕೈಗಳಿದ್ದು, ಅವುಗಳು ಕೇಂದ್ರ ಭಾಗದಿಂದ ಬಂದಿವೆ. ಎರಡು ದಿನಗಳ ಹಿಂದೆ ಶೇರ್‌ ಮಾಡಲಾದ ಈ ಚಿತ್ರವನ್ನು ಒಂದು ಲಕ್ಷಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...