alex Certify ’ಕರಾಟೆ ಕಲಿಗಳೊಂದಿಗೆ ಸುಮೋ ಕುಸ್ತಿಪಟು’: ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದ ನಾಗಾಲ್ಯಾಂಡ್ ಸಚಿವರ ಫೋಟೋ ಟ್ವೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಕರಾಟೆ ಕಲಿಗಳೊಂದಿಗೆ ಸುಮೋ ಕುಸ್ತಿಪಟು’: ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದ ನಾಗಾಲ್ಯಾಂಡ್ ಸಚಿವರ ಫೋಟೋ ಟ್ವೀಟ್

ನಾಗಾಲ್ಯಾಂಡ್‌ನ ಪ್ರೌಢಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ತಮ್ಮ ಹಾಸ್ಯ ಪ್ರಜ್ಞೆಯಿಂದ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರ ಪೋಸ್ಟ್‌ಗಳನ್ನು ನೆಟ್ಟಿಗರು ಭಾರೀ ಎಂಜಾಯ್ ಮಾಡುತ್ತಾರೆ.

ಈ ಬಾರಿ ಸಮರ ಕಲೆಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳೊಂದಿಗೆ ಫೋಟೋ ತೆಗೆಸಿಕೊಂಡಿರುವ ಅಲಾಂಗ್, ಆ ಫೋಟೋಗೊಂದು ಫನ್ನಿ ಕ್ಯಾಪ್ಷನ್ ಹಾಕಿ ಶೇರ್‌ ಮಾಡಿಕೊಂಡಿದ್ದಾರೆ.

ಕರಾಟೆ ಗೆಟಪ್‌ನಲ್ಲಿರುವ ಮಕ್ಕಳೊಂದಿಗೆ ಕ್ಯಾಶುವಲ್ ಧಿರಿಸಿನಲ್ಲಿ ನಿಂತಿರುವ ತಮ್ಮ ಫೋಟೋಗೆ “ಕರಾಟೆ ಮಕ್ಕಳೊಂದಿಗೆ ಸುಮೋ ಕುಸ್ತಿ ಪಟು,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ ಅಲಾಂಗ್.

ತಮ್ಮನ್ನೇ ತಾವು ತಮಾಷೆ ಮಾಡಿಕೊಳ್ಳುವ ಅಲಾಂಗ್‌ರ ಈ ವ್ಯಕ್ತಿತ್ವಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...