alex Certify ಮನೆ ಮುಂದೆ ನಿಂತಿದ್ದ ಪ್ರೇಯಸಿ ಬಳಿ ಬಂದ ಪ್ರಿಯಕರನಿಂದ ದುಷ್ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮುಂದೆ ನಿಂತಿದ್ದ ಪ್ರೇಯಸಿ ಬಳಿ ಬಂದ ಪ್ರಿಯಕರನಿಂದ ದುಷ್ಕೃತ್ಯ

ಮೈಸೂರು: ಭಗ್ನ ಪ್ರೇಮಿಯೊಬ್ಬ ಪ್ರೇಯಸಿಗೆ ಚಾಕುವಿನಿಂದ ಇರಿದ ಘಟನೆ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಗನ್ ಇಂತಹ ಕೃತ್ಯವೆಸಗಿದ ಆರೋಪಿ ಎಂದು ಹೇಳಲಾಗಿದೆ. ಯುವತಿ ಹಾಗೂ ಗಗನ್ ಕೆಲವು ವರ್ಷಗಳಿಂದ ಪ್ರೀತಿಸಿದ್ದು, ಇತ್ತೀಚೆಗೆ ಆತನಿಂದ ಯುವತಿ ದೂರವಾಗಿದ್ದಳು ಎನ್ನಲಾಗಿದೆ. ಇವತ್ತು ಬೆಳಗ್ಗೆ ಮನೆ ಮುಂದೆ ಯುವತಿ ನಿಂತಿದ್ದ ಸಂದರ್ಭದಲ್ಲಿ ಗಗನ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಯುವತಿಯನ್ನು ಕುವೆಂಪುನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...